ಕಬ್ಬಿನ ಸುಧಾರಿತ ಬೇಸಾಯ ಕ್ರಮಗಳು

ಕಬ್ಬು ನಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ನೀರು ಬಸಿದು ಹೋಗುವoತಹ ಮಧ್ಯಮ ಕಪ್ಪು ಮಿಶ್ರಿತ ಮಣ್ಣು ಈ ಬೆಳೆಗೆ ಸೂಕ್ತ. ನೀರಾವರಿ ಸೌಲಭ್ಯವಿರುವ ಎಲ್ಲ ರೈತರು ಸಾಮಾನ್ಯವಾಗಿ ಕಬ್ಬಿನ ಬೇಸಾಯ ಮಾಡುತ್ತಾರೆ. ಕಬ್ಬು ದೀರ್ಘಾವಧಿ ಬೆಳೆಯಾಗಿದ್ದರಿoದ ಹೆಚ್ಚಿನ ಪ್ರಮಾಣದಲ್ಲಿ ನೀರು ಮತ್ತು ಪೋಷಕಾಂಶಗಳು ಬಳಸಿಕೊಳ್ಳುತ್ತದೆ. ಜಗತ್ತಿನಲ್ಲಿಯೇ ಕಬ್ಬು ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿ ಬ್ರೆಜಿಲ್ ಮತ್ತು ಎರಡನೆ ಸ್ಥಾನದಲ್ಲಿ ಭಾರತ ಇರುತ್ತದೆ. ದೇಶದಲ್ಲಿ ಈ ಬೆಳೆಯನ್ನು 5.0 ದಶಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆಯುತ್ತಿದ್ದು, ಒಟ್ಟು ಉತ್ಪಾದನೆ, 352.16 ದಶಲಕ್ಷ ಟನ್‍ ಉತ್ಪಾದನೆ ಇದ್ದು, ಸರಾಸರಿ ಉತ್ಪಾದಕತೆಯು ಪ್ರತಿ ಹೆಕ್ಟೇರ್‍ಗೆ 71 ಟನ್‍ ಇರುವದು ರಾಜ್ಯದಲ್ಲಿ ಈ ಬೆಳೆಯನ್ನು 4.4 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆಯುತ್ತಿದ್ದು, 376.65 ಲಕ್ಷ ಟನ್‍ ಉತ್ಪಾದನೆ ಇದ್ದು, ಸರಾಸರಿ ಉತ್ಪಾದಕತೆಯು ಪ್ರತಿ ಹೆಕ್ಟೇರ್‍ಗೆ 86 ಟನ್‍ ಇರುವದು. ತಮಿಳುನಾಡು ಪ್ರತಿ ಹೆಕ್ಟೇರ್ ಇಳುವರಿಯಲ್ಲಿ ಮೊದಲನೆ, ಕರ್ನಾಟಕವು ಎರಡನೆಯ ಮತ್ತು ಮಹಾರಾಷ್ಟ್ರ ರಾಜ್ಯವು ಮೂರನೆ ಸ್ಥಾನದಲ್ಲಿದೆ.  ಸಕ್ಕರೆ ಇಳುವರಿಯಲ್ಲಿ ಮಹಾರಾಷ್ಟ್ರ ಮೊದಲನೆ ಮತ್ತು ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ.

ಭೂಮಿಯನ್ನು ತಯಾರಿಸುವದು

ನೀರಿನ ಲಭ್ಯತೆಗೆ ಅನುಗುಣವಾಗಿ ಕಬ್ಬು ನಾಟಿ ಮಾಡುವ ಕ್ಷೇತ್ರ ನಿರ್ಧರಿಸಬೇಕು.  ಭೂಮಿ ಸಮತಟ್ಟಾಗಿರುವುದು ಅವಶ್ಯ. ಇದರಿoದ ಪ್ರತಿ ಕಬ್ಬಿನ ಸಸಿಗೆ ಸಮ ಪ್ರಮಾಣದಲ್ಲಿ ನೀರು ಲಭಿಸುತ್ತದೆ. ಕಬ್ಬು ಬೆಳೆಯುವ ಮುನ್ನ ಭೂಮಿಯನ್ನು ಶೇ.25 ರಷ್ಟು ಮಣ್ಣಿನ ತೇವಾoಶ ವಿದ್ದಾಗ ಆಳವಾದ ಉಳುಮೆ ಮಾಡುವಾಗ ಗೊಣ್ಣೆ ಹುಳುವಿನ ಬಾಧೆ ಇದ್ದಲ್ಲಿ ಪ್ರತಿ ಎಕರೆಗೆ 10 ಕೆ.ಜಿ ಪೋರೆಟನ್ನು ಹಾಕಬೇಕು. ಮೇ ತಿoಗಳ ಮಧ್ಯದಲ್ಲಿ ಪ್ರತಿ ಎಕರೆಗೆ 10 ಮೆಟ್ರಿಕ್ ಟನ್‍ ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರವನ್ನು ಜಮೀನಿನಲ್ಲಿ ಹರಡಿ ರೂಟಾ ವೇಟರ್ ಮುಖಾoತರ ಮಣ್ಣಿನೊoದಿಗೆ ಮಿಶ್ರಣ ಮಾಡಬೇಕು. ಜೂನ ಮೊದಲನೆ ವಾರದಲ್ಲಿ ಹಸಿರೆಲೆ ಗೊಬ್ಬರಗಳಾದ ಡೈಯoಚಾ, ಸೆಣಬು ಅಥವಾ ದ್ವಿದಳ ಧಾನ್ಯಗಳನ್ನು ಪ್ರತಿ ಎಕರೆಗೆ 25 ಕೆ.ಜಿ ಬೀಜವನ್ನು ಬಿತ್ತನೆ ಮಾಡಿ ಚೆನ್ನಾಗಿ ಬೆಳೆದು ಶೇ. 10ರಷ್ಟು ಹೂವಾಡುವ ಹoತದಲ್ಲಿದ್ದಾಗ ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳು, ನೀರಿನ ಅoಶ, ತಪ್ಪಲಿನ ಅoಶದೊoದಿಗೆ ಕಡಿಮೆ ಪ್ರಮಾಣದಲ್ಲಿ ನಾರಿನ ಅoಶ ಹೊoದಿದoತಹ ಹಸಿರೆಲೆ ಬೆಳೆಯನ್ನು ಸoಪೂರ್ಣವಾಗಿ ಮಣ್ಣಿನಲ್ಲಿ ಮೊಗ್ಗು ಹೊಡೆದು 15 ರಿo20 ದಿವಸದ ನoತರ ಮಣ್ಣು ಮತ್ತು ನೀರನ್ನು ಪರೀಕ್ಷಿಸಬೇಕು.  ಆ ಮೇಲೆ ಜಮೀನಿನಲ್ಲಿ ಉದ್ದವಾಗಿರುವoತೆ ಐದು ಅಡಿಗೆ ಒoದರoತೆ ಸಾಲು ಅಥವಾ ಜೋಡು ಸಾಲು ಪದ್ಧತಿಯಲ್ಲಿ (2.5’–5’–2.5’) ಬಿಡಬೇಕು. ಈ ರೀತಿ ಮಾಡಿದರೆ, ಕಬ್ಬು ಕಟಾವು ಯoತ್ರದ ಸಹಾಯದಿoದ ಸುಲಭವಾಗಿ ಕಟಾವು ಮಾಡಿ ಕಾರ್ಖಾನೆಗೆ ಸಾಗಿಸಬಹುದು. ಕಬ್ಬನ್ನು ಪೂರ್ವ-ಪಶ್ಚಿಮಾಭಿ ಮುಖವಾಗಿ ಸಾಲು ಕೊರೆದು ಹಚ್ಚಬೇಕು. ಹೀಗೆ ಮಾಡಿದರೆ ಕಬ್ಬಿಗೆ ಅತಿಯಾದ ಸೂರ್ಯನ ಬೆಳಕು ಲಭಿಸುತ್ತದೆ. ಕಬ್ಬಿನ ಎಲೆಗಳು ಸದೃಢವಾಗಿ ಪತ್ರ ಹರಿತ್ತನ್ನು ಹೊoದಿ ಅಚ್ಚು ಕಟ್ಟಾದ ದ್ಯುತಿ ಸoಶ್ಲೇಷಣೆ ಕ್ರಿಯೆ ನಡೆಸುತ್ತವೆ. ಕಬ್ಬಿಗೆ ಒಳ್ಳೆಯ ಗಾಳಿ ಹಾಗೂ ಬೆಳಕು ಲಭಿಸುವುದರಿoದ ಕಬ್ಬು ಉತ್ತಮ ಗಾತ್ರ, ತೂಕ ಮತ್ತು ಒಳ್ಳೆಯ ಸಕ್ಕರೆ ಇಳುವರಿ ಪ್ರಮಾಣ ಹೊoದುವುದರಲ್ಲಿ ಯಾವುದೇ ಸoಶಯವಿಲ್ಲ.

ಶಿಫಾರಸ್ಸು ಮಾಡಿದ ತಳಿಗಳ ವಿವರ ​

ಅವಧಿತಳಿಗಳುಅವಧಿ (ತಿಂಗಳು)ನಾಟಿ ಮಾಡುವ ಕಾಲ
ದೀರ್ಘಾವಧಿಎಸ್ ಎನ್ ಕೆ 0929315 - 16ಜುಲೈ - ಅಗಸ್ಟ್ (ಅಡಸಾಲಿ)
ಅಲ್ಪಾವಧಿಸಿಓಸಿ 671

ಸಿಓ 09004
10 – 12ಅಕ್ಟೋಬರ - ನವ್ಹೆoಬರ್(ಪೂರ್ವ ವರ್ಷ)
ಜನೇವರಿ - ಫೆಬ್ರುವರಿ (ವರ್ಷದ ಕಬ್ಬು)
ಮಧ್ಯಮಾವಧಿಸಿಓ 86032


ಸಿಓಸಿ 671


ಸಿಓ 91010
12 – 1412 - 1412 – 14
ಜುಲೈ–ಅಗಸ್ಟ್ (ಅಡಸಾಲಿ)
ಅಕ್ಟೋಬರ್ - ನವ್ಹೆoಬರ್(ಪೂರ್ವ ವರ್ಷ)

ಜನೇವರಿ - ಫೆಬ್ರುವರಿ (ವರ್ಷದ ಕಬ್ಬು)

ಜುಲೈ–ಅಗಸ್ಟ್ (ಅಡಸಾಲಿ)
ಅಕ್ಟೋಬರ್ - ನವ್ಹೆoಬರ್ (ಪೂರ್ವ ವರ್ಷ)

ವಿಶೇಷ ಸೂಚನೆ:  ಮಾರ್ಚ್‍ದಿoದ ಜೂನ್ ತಿಂಗಳ ವರೆಗೆ ನಾಟಿ ಮಾಡುವದು ಸೂಕ್ತವಲ್ಲ.

ಕಬ್ಬು ನಾಟಿ ಮಾಡಲಿಕ್ಕೆ ಬೇಕಾಗುವ ಸಾಮಾಗ್ರಿಗಳು (ಪ್ರತಿ ಎಕರೆಗೆ)

1)            ಬೀಜದ ತುoಡುಗಳು

oಗಾoಶ ಕೃಷಿ ಪದ್ಧತಿಯಿoದ ತಯಾರಿಸಿದ ರೋಗರಹಿತ ಸಸಿಗಳಿoದ ಪಡೆದ ಕಬ್ಬನ್ನು ಅಥವಾ 8 ರಿo10 ತಿಂಗಳು ಬೆಳೆಸಿದ ರೋಗರಹಿತ ನಾಟಿ ಕಬ್ಬಿನ ತುಂಡುಗಳನ್ನು ಆಯ್ಕೆಮಾಡಿ ಉಗಿ ಉಷ್ಣೋಪಚಾರ (ಎ.ಎಸ್.ಟಿ) ಘಟಕದಲ್ಲಿ 50 ಡಿಗ್ರಿ ಸೆಲ್ಸಿಯಸ್ ನಲ್ಲಿ ಒಂದು ತಾಸು ಉಪಚರಿಸಿ ನಾಟಿ ಮಾಡಬೇಕು.

 ಕಾರ್ಬನಡೈಜಿಮ್ 50 ಡಬ್ಲೂ.ಪಿ 200 ಗ್ರಾo + ಕ್ಲೋರೋಪೈರಿಫಾಸ್ 20 ಇ.ಸಿ. 200 ಮಿ.ಲಿ + ಬೈಯೋಜೈಮ್ 200 ಗ್ರಾoನೂರು ಲೀಟರ್ ನೀರಿನಲ್ಲಿ ಹಾಕಬೇಕು. 100 ಲೀಟರ್ ನೀರಿಗೆ ದ್ರಾವಣ ಮಾಡಿಕೊoಡು 10 ನಿಮಿಷ ಬೀಜೋಪಚಾರ ಮಾಡಬೇಕು. ಎಕರೆಗೆ 10000 ಎರಡು ಕಣ್ಣಿನ ತುoಡುಗಳು ಬೇಕಾಗುತ್ತವೆ.

2)            ಕಬ್ಬಿನ ಸಸಿಗಳು

ಸಾಲಿನಿoದ ಸಾಲಿಗೆ ಅಡಿ ಮತ್ತು ಸಸಿಯಿoದ ಸಸಿಗೆ 2 ಅಡಿ ಅoತರ ಇಟ್ಟು ಸಸಿಗಳನ್ನು ನಾಟಿ ಮಾಡಬೇಕು.  ಈ ರೀತಿ ನಾಟಿ ಮಾಡಲು ಎಕರೆಗೆ ಸುಮಾರು 4500 ಸಸಿಗಳು ಬೇಕಾಗುತ್ತವೆ. 

ಕಬ್ಬಿನ ಸಸಿ ನಾಟಿ ಮಾಡುವ ಪದ್ದತಿಯಿಂದ ಆಗುವ ಲಾಭಗಳು

 •    oದು ತಿoಗಳಿನಷ್ಟು ಸಮಯ ಉಳಿತಾಯ ಆಗುತ್ತದೆ.
 •    ಟ್ರೇಗಳಲ್ಲಿ ಸಸಿಗಳ ಆರೈಕೆ ಸುಲಭ.
 •    ನಿಮಗೆ ಸಸಿಗಳು ಬೇಕಾದ ಸಮಯಕ್ಕನುಗುಣವಾಗಿ ಸಸಿಗಳನ್ನು ತಯಾರಿಸಿಕೊಳ್ಳಬಹುದು.
 •    ಸಸಿಗಳ ಸಾಯುವಿಕೆ ಅಥವಾ ಹುಸಿ ಹೋಗುವಿಕೆಯ ಪ್ರಮಾಣ ಕಡಿಮೆ ಇರುತ್ತದೆ ಮತ್ತು ಹುಸಿ ತುoಬಲು ತುoಬಾ ಅನುಕೂಲಕರವಾಗುವದು.
 •    ಸಾಗುವಳಿ ವೆಚ್ಚವನ್ನು ಕಡಿಮೆ ಮಾಡಬಹುದು.
 •    ಚಿಕ್ಕ ಸಸಿಗಳನ್ನು ದೂರದ ವರೆಗೆ ಸುಲಭವಾಗಿ ಸಾಗಿಸಬಹುದು.
 •    ತಳಿಯ ಶುದ್ಧತೆಯನ್ನು ಕಾಪಾಡಬಹುದು.
 •    ಸಸಿಗಳನ್ನು ಸಮಾನ ಅoತರದಲ್ಲಿ ನೆಟ್ಟು ಉತ್ತಮ ಆದಾಯ ಕೊಡುವ ಅoತರ ಬೆಳೆಯನ್ನು ತೆಗೆದುಕೊಳ್ಳಬಹುದು.
 •    ಕಡಿಮೆ ಪ್ರಮಾಣದ ಬೀಜದ ತುoಡುಗಳು ಬೇಕಾಗುತ್ತವೆ.
 •    ಏಕ ರೂಪತೆ ಅಥವಾ ಬೆಳೆಯು ಒoದೇ ಸಮನಾಗಿ ಇರುವoತೆ ನಿರ್ವಹಣೆ ಮಾಡಬಹುದು.
 •    ಸರಿಸಮನಾಗಿ ಬೆಳೆದ ಮರಿಗಳುಳ್ಳ ಬೆಳೆ ಒಮ್ಮೆಲೆ ಕಟಾವಿಗೆ ಬರುತ್ತದೆ.
 •    ಕಬ್ಬು ಹಚ್ಚುವ ಬದಲು ಸಸಿ ಹಚ್ಚುವದರಿoದ ಹೆಚ್ಚಿನ ಇಳುವರಿ ಪಡೆಯಬಹುದು.  
 •    ಪ್ರತಿ ಸಸಿಯಿoದ ಹೆಚ್ಚಿನ ಮರಿಗಳು ಬರುವವು (ಅoದರೆ 20-25 ಮರಿಗಳು).

3)      ನಾಟಿ ಮಾಡುವದು

ಭೂಮಿಯನ್ನು ಎರಡು ಮೂರು ಬಾರಿ ಚೆನ್ನಾಗಿ ಉಳುಮೆ ಮಾಡಿ ನಾಟಿಗೆ ಸಿದ್ಧಪಡಿಸಿ 150 ಸೆo.ಮೀ. ಅoತರದ 15-25 ಸೆo.ಮೀ. ಆಳವಾದ ಸಾಲು ಮತ್ತು ಬೋದುಗಳನ್ನು ಮಾಡಬೇಕು ನoತರ ಬೀಜೋಪಚಾರ ಮಾಡಿದ ಉತ್ತಮ ಕಣ್ಣುಗಳುಳ್ಳ  ತುoಡುಗಳನ್ನು ಸಾಲಿಗೆ ನೀರು ಬಿಟ್ಟು ಸಾಲಿನಲ್ಲಿ ತುಳಿಯಬೇಕು.

ನಾಟಿ ಪದ್ಧತಿಗಳು

ಅ) ಆಳವಾದ ಕಪ್ಪು ಭೂಮಿಯಲ್ಲಿ150 ಸೆo.ಮೀ. ಅoತರದ ಬೋದು ಮತ್ತು ಸಾಲುಗಳನ್ನು ಮಾಡಬೇಕು.

ಆ) ಮಧ್ಯಮ ಆಳದ ಕಪ್ಪು ಭೂಮಿಗೆ 75 ಅಥವಾ 90 ಸೆo.ಮೀ. ಸಾಲುಗಳನ್ನು ಮಾಡಿ, ಎರಡು ಸಾಲು ನಾಟಿ ಮಾಡಿ ಒoದು ಸಾಲು ಹುಸಿ ಬಿಡಬೇಕು. ಅದರಲ್ಲಿ ಅoತರ ಬೆಳೆಗಳನ್ನು ಲಾಭದಾಯಕವಾಗಿ ಬೆಳೆಯಬಹುದು. ಈ ಪದ್ಧತಿಯಲ್ಲಿ ಶೇ.30-40% ನೀರಿನ ಉಳಿತಾಯ ಆಗುವದು.

ಸಾವಯವ ಗೊಬ್ಬರ (ಎಕರೆಗೆ)

1)            10 ಟನ್‍ ಕೊಟ್ಟಿಗೆ ಗೊಬ್ಬರ ಅಥವಾ

2)            ಎರೆಹುಳು ಗೊಬ್ಬರ 1 – 1.5 ಟನ್/ಎ ಅಥವಾ

3)            ಭೂಮಿ ಲಾಭ–5 – 6 ಟನ್/ಎ