ಕೋಷ್ಠಕ- 2 ಕಬ್ಬಿಗೆ ಬರುವ ಕೀಟಗಳು ಮತ್ತು ಅವುಗಳ ಹತೋಟಿ ಕ್ರಮಗಳು

ಕೀಟಗಳ ಹೆಸರು ಬಾಧೆಯ ಪ್ರಮುಖ ಲಕ್ಷಣಗಳು

ಹತೋಟಿ ಕ್ರಮಗಳು

ಕಾಂಡಕೊರೆಯುವ ಕೀಟಗಳು

 • ಬೇಸಿಗೆ ಕಾಲದಲ್ಲಿ ಆಳವಾಗಿ ಉಳುಮೆ ಮಾಡುವುದು.

 • 45 ದಿನದ ಪೈರಿಗೆ ಹಗುರವಾದ ಮಣ್ಣುಎರಿಸುವದು.

 • ಅಂತರ ಬೆಳೆಯಾಗಿ, ಬೆಳ್ಳೊಳ್ಳಿ, ಉಳ್ಳಾಗಡ್ಡಿ ಮತ್ತು ಕೋತಂಬರಿಗಳನ್ನು ಬೆಳೆಯುವದು.

 • ನಾಟಿ ಮಾಡಿದ 45 ದಿನಗಳ ನಂತರ ಪ್ರತಿಎಕರೆಗೆ 20 ಸಾವಿರದಂತೆ ಟ್ರೈಕೊಗ್ರಾಮ ಪರತಂತ್ರ ಜೀವಿಯನ್ನು 5 ಬಾರಿ ವಾರದ ಅಂತರದಲ್ಲಿ ಬಿಡುಗಡೆ ಮಾಡಬೇಕು.

 • ಪ್ರತಿ ಎಕರೆಗೆ 4 ಮೋಹಕ ಬಲೆಗಳನ್ನು ಅಳವಡಿಸಬೇಕು.

 • ನಾಟಿ ಮಾಡಿದ 30-60 ದಿನಗಳ ನಂತರ ಶಿಫಾರಸ್ಸು ಮಾಡಿದ ಕೀಟನಾಶಕಗಳನ್ನು ಬಳಸಬೇಕು.

 • ಕೀಟನಾಶಕಗಳಾದ ಕ್ಲೋರಾಂಟ್ರಾನಿಲಿಪ್ರೋಲ್ 18.5% S@ 1 ಮಿಲಿ ಪ್ರತಿ ಲೀಟರ್ ನೀರಿಗೆ ಅಥವಾ ಕ್ಲೋರೊಪೈರಿಫಾಸ್ 20% ಇಅ @ 2 ಮಿಲಿ ಪ್ರತಿ ಲೀಟರ್ ನೀರಿಗೆಅಥವಾ ಫಿಪ್ರೋನಿಲ್ 5%S@ 2 ಮಿಲಿ ಪ್ರತಿ ಲೀಟರ್ ನೀರಿಗೆ ಬೆರಿಸಿ ಸಿಂಪರಣೆ ಮಾಡಬೇಕು.

 

ಕಾಂಡಕೊರೆಯುವ ಹುಳ

 

 • ನಾಟಿ ಮಾಡಲು ಆರೋಗ್ಯವಂತ ಕಬ್ಬಿನ ತುಂಡುಗಳನ್ನು ಉಪಯೋಗಿಸಬೇಕು.

 

 • ನಾಟಿ ಮಾಡಿದ 150 ಮತ್ತು 210 ದಿನಗಳಿಗೆ ಒಣಗಿದ ಮತ್ತು ಕೆಳಭಾಗದ ಎಲೆಗಳನ್ನು ತೆಗೆಯಬೇಕು.

 

 • ನಾಟಿ ಮಾಡಿದ 3-4 ತಿಂಗಳ ನಂತರ ಪ್ರತಿ ಎಕರೆಗೆ 20 ಸಾವಿರದಂತೆ ಟ್ರೈಕೋಗ್ರಾಮ ಪರತಂತ್ರ ಜೀವಿಯನ್ನು 5 ಬಾರಿ 7 ದಿನಗಳ ಅಂತರದಲ್ಲಿ ಬಿಡುಗಡೆ ಮಾಡಬೇಕು.

 

ಮಣ್ಣಿನಲ್ಲಿ ಬರುವ ಕೀಟಗಳು

ಗೊಣ್ಣೆ ಹುಳು

 

 • ಬೆಳೆ ಕಟಾವುಆದ ನಂತರ ಭೂಮಿಯನ್ನು ಆಳವಾಗಿ ಉಳುಮೆ ಮಾಡಬೇಕು.

 

 • ನೀರಿನ ಸೌಕರ್ಯವಿರುವಕಡೆ ಭೂಮಿಯಲ್ಲಿ ನೀರು ನಿಲ್ಲಿಸುವುದರಿಂದ ಈ ಕೀಟವನ್ನು ಸಂಪೂರ್ಣವಾಗಿ ಹತೋಟಿ ಮಾಡಬಹುದು.

 

 • ಏಪ್ರೀಲ್-ಮೇ ತಿಂಗಳಲ್ಲಿ ಮುಂಗಾರು ಮಳೆ ಬಂದ ಸಾಯಂಕಾಲ ಹೊರಬರುವ ದುಂಬಿಗಳನ್ನು ಫೆಟ್ರೋಮೆಕ್ಸ್ ದೀಪದ (ಲೈಟ್‍ಟ್ರ್ಯಾಪ) ಸಹಾಯದಿಂದ ಆಕರ್ಷಿಸಿ ಹಿಡಿದು ನಾಶ ಪಡಿಸಬೇಕು.

 

 • ನಾಟಿ ಮಾಡುವದಕ್ಕಿಂತ ಮುಂಚೆ ಪ್ರತಿ ಎಕರೆಗೆ 10 ಕಿಲೋ       ಫೋರೆಟ್ 10 ಜಿ ಅಥವಾ ಕಾರ್ಬೋಪ್ಯೂರಾನ್ 3 ಜಿ 4 ಕಿಲೋ ಅಥವಾ ಫೀಪ್ರೋನಿಲ್ 3 ಜಿ 7-8 ಕಿಲೋ ಮಣ್ಣಿನಲ್ಲಿ ಬೆರೆಸಬೇಕು.

 

 • ಗೊಣ್ಣೆ ಹುಳುವಿನ ಭಾದಿತ ಪ್ರದೇಶದಲ್ಲಿ ಶಿಫಾರಸ್ಸು ಮಾಡಿದ ಕೀಟನಾಶಕಗಳನ್ನು ಬಳಸಬೇಕು ಕೀಟನಾಶಕಗಳಾದ ಕ್ಲೋರಾಂಟ್ರಾನಿಲಿಪ್ರೋಲ್ 18.5% Sಅ @ 1 ಮಿಲಿ ಅಥವಾಕ್ಲೋರೊಪೈರಿಫಾಸ್ 20% ಇಅ @ 10 ಮಿಲಿ ಅಥವಾ ಫಿಪ್ರೋನಿಲ್ 5%Sಅ @ 2 ಮಿಲಿ ಅಥವಾ ಫಿಪ್ರೋನಿಲ್+ಇಮಿಡಾಕ್ಲೊಪ್ರಿಡ್ 1 ಮಿಲಿ (ಲೆಸೆಂಟಾ) ಅಥವಾ ಕ್ಲೋರೊಪೈರಿಫಾಸ್+ಸೈಪರಮೆಥರೀನ್ (ಸೂಪರ್-ಡಿ) 2 ಮಿಲಿ ಪ್ರತಿ ಲೀಟರ್ ನೀರಿಗೆ ಬೆರಿಸಿ ಸಿಂಪರಣೆ ಮಾಡಬೇಕು.

 

 • ಜೈವಿಕ ವಿಧಾನವಾಗಿ 3-4 ತಿಂಗಳ  ಬೆಳೆಯಲ್ಲಿ (ಭಾದೆರಹಿತಕಬ್ಬಿನಲ್ಲಿ) ಪ್ರತಿ ಎಕರೆಗೆ 5-6 ಕಿಲೋ ಮೆಟಾರೈಝಿಯಂ ಶಿಲೀಂದ್ರವನ್ನುತಿಪ್ಪೆ ಗೊಬ್ಬರದಲ್ಲಿ ಮಿಶ್ರಣ ಮಾಡಿಕಬ್ಬಿನ ಅಕ್ಕ ಪಕ್ಕ ಸಾಲು ಕೊರೆದುಮಣ್ಣಿನಲ್ಲಿ ಸೇರಿಸಬೇಕು. 

 

ಗೆದ್ದಲು ಹುಳುಗೆದ್ದಲು ಹುಳು

 • ನೀರಿನ ಸೌಕರ್ಯವಿರುವಕಡೆ ಭೂಮಿಯಲ್ಲಿ ನೀರು ನಿಲ್ಲಿಸುವದರಿಂದ ಈ ಕೀಟವನ್ನು ಸಂಪೂರ್ಣವಾಗಿ ಹತೋಟಿ ಮಾಡಬಹುದು.

 • ಗೆದ್ದಲು ಹುತ್ತಿನಲ್ಲಿರುವರಾಣಿ ಹುಳವನ್ನು ನಾಶಪಡಿಸುವದು.

 • ಭಾದೆಗೊಳಗಾದ ಕಬ್ಬಿನ ತುಂಡುಗಳನ್ನು ತೆಗೆದುಹಾಕುವುದು.

 • ನಾಟಿ ಸಮಯದಲ್ಲಿ ಕಬ್ಬಿನ ತುಂಡುಗಳನ್ನು ಕ್ಲೋರೊಪೈರಿಫಾಸ್ (2 ಮಿಲಿ ಪ್ರತಿ ಲೀಟರ್ ನೀರಿಗೆ) ಕೀಟನಾಶಕದೊಂದಿಗೆ ಬೀಜೊಪಚಾರ ಮಾಡಬೇಕು.

 • ನಾಟಿ ಮಾಡುವದಕ್ಕಿಂತ ಮುಂಚೆ ಪ್ರತಿಎಕರೆಗೆ 10 ಕಿಲೋ ಫೋರೆಟ್ 10 ಜಿ ಅಥವಾ ಕಾರ್ಬೋಪ್ಯೂರಾನ್ 3 ಜಿ 4 ಕಿಲೋ ಅಥವಾ ಫೀಪ್ರೋನಿಲ್ 3 ಜಿ 7-8 ಕಿಲೋ ಮಣ್ಣಿನಲ್ಲಿ ಬೆರೆಸಬೇಕು.

 • ಗೆದ್ದಲು ಹುಳುವಿನ ಕೀಟ ಭಾದೆ ಕಂಡುಬಂದಲ್ಲಿ ಪ್ರತಿ ಲೀಟರ್ ನೀರಿಗೆ ಕ್ಲೋರಾಂಟ್ರಾನಿಲಿಪ್ರೋಲ್ 5% S@ 1 ಮಿಲಿ ಅಥವಾಕ್ಲೋರೊಪೈರಿಫಾಸ್ 20% ಇಅ @ 10 ಮಿಲಿನ್ನುಕಬ್ಬಿನ ಬುಡದ ಸುತ್ತ ಸುರಿಯಬೇಕು.

ರಸ ಹೀರುವ ಕೀಟಗಳು

ಬಿಳಿ ಉಣ್ಣೆ ಹೇನು

ತಿಗಣಿ ಹುಳ

ಪೈರಿಲ್ಲಾ

ಶೆಲ್ಕ ಕೀಟ

ಬಿಳಿ ನೊಣ

 • ಕಬ್ಬು ನಾಟಿಯಲ್ಲಿ ಜೋಡು ಸಾಲು (ಪಟ್ಟಾ) ಅಥವಾ ಅಗಲವಾದ   ಸಾಲು (4-5 ಅಡಿ) ಪದ್ಧತಿಯನ್ನುಅನುಸರಿಸಬೇಕು.

 • ನಾಟಿ ಸಮಯದಲ್ಲಿ ಕಬ್ಬಿನ ತುಂಡುಗಳನ್ನು ಕ್ಲೋರೊಪೈರಿಫಾಸ್ (2 ಮಿಲಿ ಪ್ರತಿ ಲೀಟರ್ ನೀರಿಗೆ) ಕೀಟನಾಶಕದೊಂದಿಗೆ ಬೀಜೊಪಚಾರ ಮಾಡಬೇಕು.

 • ಕಬ್ಬಿನಗದ್ದೆಯಲ್ಲಿ ನೀರು ಚೆನ್ನಾಗಿ ಬಸಿದು ಹೋಗುವಂತೆ ಬಸಿ ಗಾಲುವೆಗಳನ್ನು ನಿರ್ಮಿಸಬೇಕು.

 • ಸಾರಜನಕಯುಕ್ತಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸದೆ ಶಿಫಾರಸ್ಸಿನಂತೆ ಬಳಸಬೇಕು.

 • ನಾಟಿ ಮಾಡಿದ 5 ರಿಂದ 6 ತಿಂಗಳಿಗೆ ಒಣಗಿದ ಮತ್ತು    ಕೆಳಭಾಗದ  ಎಲೆಗಳನ್ನು ತೆಗೆಯಬೇಕು.

 • ಪರಭಕ್ಷಕ ಕೀಟಗಳನ್ನು ಕಬ್ಬಿನ ಪರಿಸರದಲ್ಲಿ ಉತ್ತೇಜಿಸುವದು.

 • ಶಿಫಾರಸ್ಸು ಮಾಡಿದ ಕೀಟನಾಶಕಗಳನ್ನು ಸಿಂಪರಣೆ ಮಾಡಬೇಕು ಕೀಟನಾಶಕಗಳಾದ ಬೈಫೇಂತಿರಿನ್ 10 % ಇಅ 2 ಮಿಲಿ ಅಥವಾ ಮೊನೊಕ್ರೋಟೊಫಾಸ್ 41% ಇಅ 5 ಮಿಲಿ ಅಥವಾ ಕ್ಲೋರೊಪೈರಿಫಾಸ್ 20 % ಇಅ 2 ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.