ಕೋಷ್ಠಕ- 3 ಕಬ್ಬಿಗೆ ಬರುವ ರೋಗಗಳು ಮತ್ತು ಅವುಗಳ ಹತೋಟಿ ಕ್ರಮಗಳು

ರೋಗದ ಹೆಸರು ಮತ್ತು ರೋಗದ ಲಕ್ಷಣಗಳು

ಹೊತೋಟಿ ಕ್ರಮಗಳು

ಕೆಂಪು ಕೊಳೆ ರೋಗ

 • ಹಿಂದಿನ ಬೆಳೆಯ ಒಣಗಿದ ಎಲೆ ಹಾಗೂ ಕುಳೆಗಳನ್ನು ಸುಟ್ಟು ಹಾಕಬೇಕು.

 • ನಾಟಿ ಮಾಡಲು ಆರೋಗ್ಯವಂತ ಕಬ್ಬಿನ ತುಂಡುಗಳನ್ನೇ ಉಪಯೋಗಿಸಬೇಕು.

 • ನಾಟಿ ಮಾಡಲು ಉಪಯೋಗಿಸುವ ಕಬ್ಬಿನ ತುಂಡುಗಳನ್ನು ಬಿಸಿ ನೀರು (52 ಡಿಗ್ರಿ ಸೆಂಟಿಗ್ರೇಡ್‍ನಲ್ಲಿ 30 ನಿಮಿಷ) ಹಾಗೂ ಕಾಪ್ಟಾನ್ 80 ಡಬ್ಲ್ಯೂಪಿನ್ನು ಶೇ.0.2 ಶಿಲೀಂಧ್ರ ನಾಶಕದಿಂದ 15 ನಿಮಿಷ ಉಪಚರಿಸಬೇಕು.

 • ರೋಗಗ್ರಸ್ಥ ಕಬ್ಬಿನ ಕ್ಷೇತ್ರದಿಂದ ಆರೋಗ್ಯವಂತ ಕಬ್ಬಿನ ಕ್ಷೇತ್ರದ ಕಡೆಗೆ ನೀರು ಹಾಯದಂತೆ ನೋಡಿಕೊಳ್ಳಬೇಕು.

 • ರೋಗದ ಹಾವಳಿ ಹೆಚ್ಚಾಗಿದ್ದ ಪಕ್ಷದಲ್ಲಿ ಕುಳೆ ಬೆಳೆಯನ್ನು ಬೆಳೆಯಬಾರದು.

 • ರೋಗಗ್ರಸ್ ಥಕಬ್ಬನ್ನು ಬುಡ ಸಮೇತ ಕಿತ್ತು ನಾಶಪಡಿಸಬೇಕು.

ಕಪ್ಪುಚಾವಟಿರೋಗ (ಕಾಡಿಗೆರೋಗ)

 • ನಾಟಿ ಮಾಡಲು ರೋಗ ರಹಿತ ಕಬ್ಬಿನ ತುಂಡುಗಳನ್ನೇ ಉಪಯೋಗಿಸಬೇಕು.

 • ನಾಟಿ ಮಾಡಲು ಉಪಯೋಗಿಸುವ ಕಬ್ಬಿನ ತುಂಡುಗಳನ್ನು ಬಿಸಿ ನೀರಿನ ಉಪಚಾರ ಮಾಡಬೇಕು (52 ಡಿಗ್ರಿ ಸೆಂಟಿಗ್ರೇಡ್‍ಉಷ್ಣಾಂಶದ ನೀರಿನಲ್ಲಿ 30 ನಿಮಿಷ ಅದ್ದಿ ತೆಗೆಯಬೇಕು).

 • ನಾಟಿ ಮಾಡಲುಉಪಯೋಗಿಸುವಕಬ್ಬಿನ ತುಂಡುಗಳನ್ನು ಶಿಲೀಂಧ್ರನಾಶಕಗಳಾದ ಕಾರ್ಬನ್‍ಡೈಜಿಮ್ 50 ಡಬ್ಲ್ಯೂಪಿ ಅಥವಾ ಬೆನೋಮಿಲ್ 50 ಡಬ್ಲ್ಯೂಪಿ ಶೇ.0.1 ಪ್ರಮಾಣದಲ್ಲಿ 10-15 ನಿಮಿಷ ಉಪಚರಿಸಬೇಕು. 

ಅನಾನಸ್ (ಪೈನಾಪಲ್) ರೋಗ (ತುಂಡು ಕುಳೆ ರೋಗ)

 • ನಾಟಿ ಮಾಡಲುರೋಗ ರಹಿತ ಕಬ್ಬಿನ ತುಂಡುಗಳನ್ನೇ ಉಪಯೋಗಿಸಬೇಕು.

 • ನಾಟಿ ಮಾಡಲು ಉಪಯೋಗಿಸುವ ಕಬ್ಬಿನ ತುಂಡುಗಳಿಗೆ ಬಿಸಿ ನೀರಿನ ಉಪಚಾರ ಮಾಡಬೇಕು (52 ಡಿಗ್ರಿ ಸೆಂಟಿಗ್ರೇಡ್‍ ಉಷ್ಣಾಂಶದ ನೀರಿನಲ್ಲಿ 30 ನಿಮಿಷ ಅದ್ದಿ ತೆಗೆಯಬೇಕು).

 • ನಾಟಿ ಮಾಡಲು ಉಪಯೋಗಿಸುವ ಕಬ್ಬಿನ ತುಂಡುಗಳನ್ನು ಶಿಲೀಂಧ್ರ    ನಾಶಕಗಳಾದ ಕಾರ್ಬನ್‍ಡೈಜಿಮ್ 50 ಡಬ್ಲ್ಯೂಪಿ ಅಥವಾ ಬೆನೋಮಿಲ್ 50 ಡಬ್ಲ್ಯೂಪಿ ಶೇ.0.1 ಪ್ರಮಾಣದಲ್ಲಿ 10-15 ನಿಮಿಷ ಉಪಚರಿಸಬೇಕು.

 • ರೋಗದ ಲಕ್ಷಣಗಳು ತೋರುವ ಗಿಡಗಳನ್ನು ಬೇರು ಸಮೇತಕಿತ್ತು ನಾಶ ಮಾಡಬೇಕು.

 • ರೋಗದ ಲಕ್ಷಣಗಳು ಕಂಡು ಬಂದ ಹೊಲದಲ್ಲಿ ಕುಳೆ ಬೆಳೆಯನ್ನು ತೆಗೆಯಬಾರದು.

ಎಲೆ ಚುಕ್ಕೆ ರೋಗ (ಕಣ್ಣು ಚುಕ್ಕೆ ರೋಗ)

 • ಬಿತ್ತನೆಗೆ ಮೊದಲು ಹಿಂದಿನ ಬೆಳೆಯ ಎಲೆಗಳನ್ನು ತೆಗೆದು ಸುಟ್ಟು ಹಾಕಬೇಕು.

 • ಕಬ್ಬಿನ ಹೊಲದಲ್ಲಿ ನೀರು ನಿಂತಲ್ಲಿರೋಗವು ಉಲ್ಭಣಗೊಳ್ಳುವುದರಿಂದ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

 • ಮಣ್ಣು ಪರೀಕ್ಷೆ ಮಾಡಿಸಿ ಸರಿಯಾದ ಪ್ರಮಾಣದಲ್ಲಿ ಸಾರಜನಕ, ರಂಜಕ ಹಾಗೂ ಪೊಟ್ಯಾಷ್ ಗೊಬ್ಬರವನ್ನುಕೊಡಬೇಕು.

ತುಕ್ಕುರೋಗ

 • ರೋಗದ ಲಕ್ಷಣಗಳು ತೋರುವ ಗಿಡಗಳನ್ನು ಬೇರುಸಮೇತ ಕಿತ್ತು ನಾಶ ಮಾಡಬೇಕು.

 • ರೋಗದ ಪ್ರಾರಂಭಿಕ ಹಂತದಲ್ಲಿ ಎಲೆಗಳ ಮೇಲೆ ರೋಗದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಜೈನೆಟ್‍ ಅಥವಾ ಮ್ಯಾಂಕೊಜೆಬ್ 2 ಗ್ರಾಂ 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಿರಣೆ ಮಾಡಬೇಕು.

 • ಬೆಳೆಯ ಹಂತ ಹಾಗೂ ತೀವ್ರತೆ ನೋಡಿ 4-5 ಸಿಂಪರಣೆ ಮಾಡಿದರೆ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.

ಕಬ್ಬಿನ ಮಚ್ಛೆ (ಮೊಜಾಯಿಕ್) ರೋಗ

 • ರೋಗಪೀಡಿತ ಗಿಡಗಳನ್ನು ಗುರುತಿಸಿ ಅವುಗಳನ್ನು ಕಿತ್ತು ನಾಶ ಮಾಡಬೇಕು.

 • ರೋಗ ನಿರೋಧಕಕಬ್ಬಿನ ತಳಿಗಳನ್ನು ಬೆಳೆಯಬೇಕು (ಉದಾ: ಸಿಓ 86032).

 • ಕಬ್ಬಿನಲ್ಲಿ ಹೇನಿನ ಬಾಧೆಕಂಡು ಬಂದಲ್ಲಿ ತಿಂಗಳಿಗೆ 2 ಸಲ ಕೀಟನಾಶಕಗಳನ್ನು ಸಿಂಪಡಿಸಬೇಕು (ಪ್ರಾರಂಭಿಕಹಂತದಲಿ ಮಾತ್ರ).

 • ರೋಗ ಮುಕ್ತ ಪ್ರದೇಶಗಳಿಂದ ತoದ ಬೀಜವನ್ನೆ ಬಿತ್ತನೆಗೆ ಬಳಸಬೇಕು.

ಕುಳೆ ಕುಂಠಿತರೋಗ

 • ಬಿತ್ತನೆಗೆ ರೋಗ ರಹಿತ ಕಬ್ಬಿನ ತುಂಡುಗಳನ್ನೇ ಉಪಯೋಗಿಸಬೇಕು.

 • ಬಿತ್ತನೆಗೆ ಉಪಯೋಗಿಸುವ ಕಬ್ಬಿನ ತುಂಡುಗಳನ್ನು 50 ಡಿಗ್ರಿ ಉಷ್ಣಾಂಶ ಹೊಂದಿದ ಬಿಸಿ ನೀರಿನಲ್ಲಿ ಎರಡು ಗಂಟೆಗಳ ಕಾಲ ನೆನೆಸಿ ತೆಗೆಯಬೇಕು, ಇದರಿಂದ ರೋಗ ಕಾರಕವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.

 • ಬಿತ್ತನೆಗೆ ಕಬ್ಬಿನ ತುಂಡುಗಳನ್ನು ಕತ್ತರಿಸಲು ಉಪಯೋಗಿಸುವ ಚಾಕು ಅಥವಾ ಕತ್ತಿಯನ್ನು ಡೆಟಾಲ್‍ ಅಥವಾ ಮದ್ಯಸಾರದಲ್ಲಿ 5 ನಿಮಿಷ ಉಪಚರಿಸಬೇಕು.

 • ರೋಗದ ಲಕ್ಷಣಗಳು ಕಂಡಕೂಡಲೆ ಅಂತಹ ಕಬ್ಬನ್ನು ಕಿತ್ತು ನಾಶಪಡಿಸಬೇಕು.

ಹುಲ್ಲು ಪೊದೆರೋಗ (ಬಿಳಿ ಎಲೆ ರೋಗ)

 • ರೋಗದ ಭಾದೆಕಂಡು ಬಂದ ಪ್ರದೇಶಗಳಿಂದ ಕಬ್ಬಿನ ಬೀಜವನ್ನು ಉಪಯೋಗಿಸಬಾರದು.

 • ಬಿತ್ತನೆಗೆ ಉಪಯೋಗಿಸುವ ಕಬ್ಬಿನ ತುಂಡುಗಳನ್ನು ಬಿಸಿ ನೀರಿನಲ್ಲಿ   (52 ಡಿಗ್ರಿ ಉಷ್ಣಾಂಶ) 1 ಗಂಟೆ ಕಾಲ ಉಪಚರಿಸಿ ಬಿತ್ತಬೇಕು. ಉಷ್ಣ ಶಾಖದಿಂದಲೂ ಬಿತ್ತನೆ ತುಂಡುಗಳನ್ನು ಉಪಚರಿಸಬಹುದು (54 ಡಿಗ್ರಿಉಷ್ಣಾಂಶದಲ್ಲಿ 8 ಗಂಟೆ).

 • ರೋಗ ಪೀಡಿತ ಗಿಡಗಳ ಸಂಖ್ಯೆ ಕಡಿಮೆಇದ್ದಲ್ಲಿ ಅವುಗಳನ್ನು ಕಿತ್ತು ನಾಶಪಡಿಸಬೇಕು.

 • ಸ್ಟ್ರೆಪ್ಟೊಸೈಕ್ಲಿನ್ 5 ಗ್ರಾಂ 1 ಲೀಟರ್ ನೀರಿನಲ್ಲಿ ಬೆರೆಸಿ ಬೀಜೋಪಚಾರ ಮಾಡುವದರಿಂದಲೂ ರೋಗವನ್ನು ನಿಯಂತ್ರಿಸಬಹುದು ಎಂದು ತಿಳಿದು ಬಂದಿದೆ.

ಕಬ್ಬಿನ ಹಳದಿ ಎಲೆ ನಂಜುರೋಗ

 • ರೋಗತ ಗುಲಿದ ಕಬ್ಬನ್ನು ಕಿತ್ತು ಸುಡಬೇಕು.

 • ಮೊದಲನೇ(ಮುಖ್ಯ) ಬೆಳೆಯಲ್ಲಿ ರೋಗದ ತೀವ್ರತೆ ಜಾಸ್ತಿ ಇದ್ದಲ್ಲಿ ಕುಳೆ ಬೆಳೆಯನ್ನು ಬೆಳೆಯಬಾರದು.

 • ಕಡೆಗಾಣಿಸಿದ ಬೆಳೆಯಲ್ಲಿ ರೋಗವು ಹೆಚ್ಚಾಗಿ ಕಂಡು ಬರುವುದರಿಂದ ಬೆಳೆಯಲ್ಲಿ ಪೋಷಕಾಂಶ ಹಾಗೂ ನೀರಾವರಿ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು.