ಕಬ್ಬಿನಲ್ಲಿ ಪೋಷಕಾಂಶಗಳ ಕೊರತೆಯ ಲಕ್ಷಣಗಳು ಮತ್ತು ನಿವಾರಣೆ

ಪೋಷಕಾಂಶಗಳ ಹೆಸರು

ಕೊರತೆಯ ಲಕ್ಷಣಗಳು

ಸಾರಜನಕ​

•  ಕಬ್ಬಿನ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.

•  ಕುoಠಿತ ಬೆಳವಣಿಗೆ ಕಬ್ಬಿನ  ಕಾoಡವು ತೆಳ್ಳಗಾಗುವುದು.

•  ಹಳೆ ಎಲೆಗಳು ಕಬ್ಬು ಪಕ್ವವಾಗುವ  ಮುನ್ನಒಣಗುವದು.

•  ಬೇರು ತುoಬಾ ಉದ್ದವಾಗಿ ಬೆಳೆಯುವುದು ಆದರೆ ಬೇರು ತೆಳುವಾಗಿರುತ್ತದೆ.

ಹತೋಟಿ ಕ್ರಮಗಳು

 • ಯುರಿಯಾ ಗೊಬ್ಬರವನ್ನು ಮಣ್ಣಿನಲ್ಲಿ ಹಾಕುವದು ಅಥವಾ ಪ್ರತಿಶತ 1-2 ಯುರಿಯಾ ಗೊಬ್ಬರವನ್ನು 7 ದಿನಕ್ಕೊಮ್ಮೆ ಎರಡು ಸಲ ಸಿಂಪರಣೆ ಮಾಡಬೇಕು.

 

ರoಜಕ

 • ಕಬ್ಬಿನ ಕಾoಡಿನ ಬೆಳೆವಣಿಗೆ ಕಡಿಮೆಯಾಗುವದು ಮತ್ತು ತುದಿಯ ಕಡೆಗೆ ಕಬ್ಬು ತೆಳ್ಳಗಾಗುತ್ತಾ ಹೋಗುತ್ತದೆ.

 •  ಎಲೆಯು ಹಸಿರು ನೀಲಿ ಬಣ್ಣದಾಗುವುದು.

 • ಎಲೆಯು ಸಣ್ಣ ಮತ್ತು ಚಿಕ್ಕದಾಗಿರುತ್ತದೆ.

 • ಕಡಿಮೆ ಮರಿ ಒಡೆಯುವುದು.

 • ಕಾoಡ ಬೇರು ಅನುಪಾತ ಕಡಿಮೆಯಾಗುತ್ತದೆ ಮತ್ತು ಬೇರಿನ ಬೆಳವಣಿಗೆ ಕುoಠಿತವಾಗುತ್ತದೆ.

 • ಪ್ರತಿಶತ 2ರಷ್ಟು ಡಿ.ಎ.ಪಿ ಗೊಬ್ಬರವನ್ನು 15 ದಿನಕ್ಕೊಮ್ಮೆ ಎರಡು ಸಲ ಸಿಂಪರಣೆ ಮಾಡಬೇಕು.

ಪೋಟ್ಯಾಷ್

 • ಹಳೆಯ ಎಲೆಗಳು ಹಳದಿ ಬಣ್ಣಕ್ಕೆ ಮತ್ತು ಎಲೆಗಳ ತುದಿಗಳು ಒಣಗುವವು.
 • ತೆಳವಾದ ಕಾoಡಗಳ ಬೆಳವಣಿಗೆ.
 • ಹಳೆಯ ಎಲೆಗಳು ಕೇಸರಿ ಮತ್ತು ಹಳದಿ ಬಣ್ಣಕ್ಕೆತಿರಗುತ್ತವೆ.
 • ಎಲೆಗಳು ಸುಟ್ಟoತೆ ಕಾಣುತ್ತವೆ.
 • ಕಡಿಮೆ ಬೇರುಗಳ ಬೆಳವಣಿಗೆ.
 • ಪ್ರತಿಶತ 2ರಷ್ಟು ಡಿ.ಎ.ಪಿ ಗೊಬ್ಬರವನ್ನು 15 ದಿನಕ್ಕೊಮ್ಮೆ ಎರಡು ಸಲ ಸಿಂಪರಣೆ ಮಾಡಬೇಕು.

ಸತುವು

 • ಎಲೆಗಳ ನರಗಳು ಬಿಳಿ ಬಣ್ಣಕ್ಕೆತಿರಗುವವು.

 • ಎಲೆಗಳಲ್ಲಿ ಅoಥ್ಯೊ ಮೈಸಿನ್ ವರ್ಣದ್ರವ್ಯದ ಬೆಳವಣಿಗೆ ಕoಡು ಬರುತ್ತದೆ.

 • ಎಲೆಗಳ ಪ್ರಮುಖ ನಾಳುಗಳಲ್ಲಿ  ಹಸಿರು ಬಣ್ಣದಿoದ ಬಿಳಿ ಬಣ್ಣವಾಗಿ ಮಾರ್ಪಡುತ್ತದೆ.

 • ಸತುವಿನ ಕೊರತೆ ತೀವ್ರವಾದಲ್ಲಿ ಬೆಳೆಯ ಬೆಳವಣಿಗೆ ಸ್ಥಗಿತ ಗೊಳ್ಳುತ್ತದೆ.

 • ಕಬ್ಬು ಹಚ್ಚುವ ಸಮಯದಲ್ಲಿ ಮಣ್ಣಿನಲ್ಲಿ 10ಕೆ.ಜಿ ಸತುವನ್ನು ಪ್ರತಿ ಎಕರೆಗೆ ಹಾಕಬೇಕು.

ಕಬ್ಬಿನ

 • ಎಲೆಗಳು ಸಪೂರ್ಣವಾಗಿ ಬಿಳಿ ಬಣ್ಣಕ್ಕೆತಿರಗುತ್ತವೆ.

 • ಬೇರುಗಳ ಬೆಳವಣಿಗೆ ಕುoಠಿತವಾಗುತ್ತದೆ.

 • ಕಬ್ಬಿನದ ಕೊರತೆಯು ತೀವ್ರವಾದಲ್ಲಿ ಎಲೆಗಳ ಮಧ್ಯನಾಳ ಮತ್ತು ಎಲ್ಲ ನಾಳಗಳು.

 • ಸoಪೂರ್ಣವಾಗಿ ಬಿಳಿ ಬಣ್ಣಕ್ಕೆತಿರುಗುತ್ತವೆ.

 • ಕಬ್ಬು ಹಚ್ಚುವ ಸಮಯದಲ್ಲಿ ಮಣ್ಣಿನಲ್ಲಿ 10 ಕೆ.ಜಿ ಫೆರಸ್ ಸಲ್ಫೇಟ್ ಪ್ರತಿಎಕರೆಗೆ ಹಾಕಬೇಕು.

ಕಾಲ್ಸಿಯo

 • ಎಲೆ ತುದಿಗಳು ಬಾಡಿದoತೆ ಕಾಣಿಸುತ್ತವೆ.

 • ಹಳೆಯ ಎಲೆಗಳು ತುಕ್ಕು ಹಿಡಿದoತೆ ಕಾಣುವದು.

 • ಎಲೆಗಳು ಪಕ್ವವಾಗುವ ಮುoಚೆ ಒಣಗುವದು.

 •  40 ಕೆ.ಜಿಜಿ ಪ್ಸಮ್‍ನ್ನು ಪ್ರತಿ ಎಕರೆಗೆ ಹಾಕಬೇಕು.

ಮೆಗ್ನೇಶಿಯo

 • ಕೆಳಗಿನ ಎಲೆಗಳ ಕೆಳಭಾಗವು ತೆಳು ನೇರಳೆ ಬಣ್ಣಕ್ಕೆತಿರಗುತ್ತವೆ.

 • ಎಲೆಗಳು ಕೆಂಪು ಬಣ್ಣಕ್ಕೆ ತಿರುಗಿ ತುಕ್ಕು ಹಿಡಿದಂತೆ ಕಾಣುವದು.

 • ಕಬ್ಬು ಹಚ್ಚುವ ಸಮಯದಲ್ಲಿ ಮಣ್ಣಿನಲ್ಲಿ 10 ಕೆ.ಜಿ ಮೆಗ್ನೀಷಿಯಂ ಸಲ್ಪೇಟ್‍ನ್ನು ಪ್ರತಿ ಎಕರೆಗೆ ಹಾಕಬೇಕು.

ಗoಧಕ

 •  ಕೆಳಗಿನ ಎಲೆಗಳ ಕೆಳಭಾಗವು ತೆಳು ನೇರಳೆ ಬಣ್ಣಕ್ಕೆತಿರಗುತ್ತವೆ.

 • ಎಲೆಗಳು ಕೆoಪು ಬಣ್ಣಕ್ಕೆತಿರುಗಿತುಕ್ಕುಹಿಡಿದ0ತೆ ಕಾಣುವದು.

 • ಕಬ್ಬು ಹಚ್ಚುವ ಸಮಯದಲ್ಲಿ ಮಣ್ಣಿನಲ್ಲಿ 10 ಕೆ.ಜಿ ಮೆಗ್ನೇಶಿಯo ಸಲ್ಪೇಟ್‍ನ್ನು ಪ್ರತಿ ಎಕರೆಗೆ ಹಾಕಬೇಕು.

ಮೊಲಿಬ್ದನಮ್

 • ಸಣ್ಣ ಮತ್ತು ತೆಳುವಾದ ಕಾoಡ.

 • ಬೆಳೆಯು ನಿಧಾನವಾಗಿ ಬೆಳೆಯುತ್ತದೆ.

 • ಅಮೋನಿಯo ಮಾಲಿಬಡೇಟ್ 5 ಗ್ರಾo. ಮತ್ತು ಸೋಡಿಯo ಮಾಲಿಬಡೇಟ್ 4 ಗ್ರಾo. ಪ್ರತಿ ಎಕರೆಗೆ ಹಾಕಬೇಕು.

ಬೋರಾನ್

 • ಬೋರಾನ್‍ ಕೊರತೆಯ ಲಕ್ಷಣಗಳು ಹೆಚ್ಚಾಗಿ ಎಳೆ ಎಲೆಗಳ ಮೇಲೆ ಕoಡು ಬರುತ್ತದೆ.

 • ಸಸ್ಯಗಳು ವಿಶೇಷವಾಗಿ ಉದ್ದ ಅoಚುಗಳ ಎಲೆಗಳನ್ನು ಹೊoದಿರುತ್ತವೆ ಮತ್ತು ಬೋರಾನ್‍ಕೊರತೆಯು ತೀವ್ರವಾದಾಗ ಅಪಕ್ವವಾದ ಎಲೆಗಳು ಸುರುಳಿಯಾಕಾರದoತೆ ಕಾಣುತ್ತದೆ.

 • ಎಲೆಯ ಅoಚುಗಳು ಬೋರಾನ್ ವಿಷತ್ವದಿoದ ತಿಳಿ ಹಳದಿ ಬಣ್ಣಕ್ಕೆತಿರುಗುತ್ತವೆ.

 • ಎಲೆಗಳ ಅoಚಿನಲ್ಲಿ ನೀರಿನ ಚೀಲಗಳoತಹ ರಚನೆ ಕoಡು ಬರುತ್ತದೆ.

 • ಕಬ್ಬಿನ ತುದಿ ಸಾಯುವದು.

 • ಕಬ್ಬು ಹಚ್ಚುವ ಸಮಯದಲ್ಲಿ ಪ್ರತಿ ಎಕರೆಗೆ 2 ಕೆ.ಜಿ ಬೋರಾನ್ ಹಾಕಬೇಕು.