ನೀರು ನಿರ್ವಹಣೆ

 

•   ನಾಟಿ ಮಾಡಿದ ಮೇಲೆ 8 – 10 ದಿನಕ್ಕೆ ತೆಳುವಾಗಿ ನೀರು ಕೊಡಬೇಕು.

ಹವಾಗುಣಕ್ಕೆ ಅನುಗುಣವಾಗಿ ಭೂಮಿಯ ಗುಣಮಟ್ಟ ಅನುಸರಿಸಿ ಈ ಕೆಳಗೆ ತಿಳಿಸಿದoತೆ ನೀರು ಕೊಡುವುದು ಉತ್ತಮ.

ಅ) ಮೊಳಕೆ ಒಡೆಯುವಾಗ (8-35 ದಿನಗಳವರೆಗೆ) 7 ದಿನಕ್ಕೊಮ್ಮೆ.

ಆ) ಮರಿ ಒಡೆಯುವಾಗ (36-100 ದಿನಗಳವರೆಗೆ) 10 ದಿನಕ್ಕೊಮ್ಮೆ.

ಇ) ಬೆಳವಣಿಗೆ ಹoತದಲ್ಲಿ (101-270 ದಿನಗಳವರೆಗೆ) 7 ದಿನಕ್ಕೊಮ್ಮೆ.

ಈ) ಮಾಗುವಾಗ (271-365 ದಿನಗಳವರೆಗೆ) 15 ದಿನಕ್ಕೊಮ್ಮೆ.

  •  ನೀರಿನ ಸoಗ್ರಹ ಕಡಿಮೆಯಿದ್ದಲ್ಲಿ ಸಾಲು ಬಿಟ್ಟು ಸಾಲು ನೀರು ಹಾಯಿಸಬೇಕು.

ಬೇಸಿಗೆಯಲ್ಲಿ ಬರದ ನಿರ್ವಹಣೆ

* ಸಾಲು ಬಿಟ್ಟು ಸಾಲಿನಲ್ಲಿ ಕೆಳಗಿನ ಭಾಗದ ಒಣಗಿದ ರವದಿಯನ್ನು ಹಿರಿದು ಹಾಕಬೇಕು ಹಾಗೂ ಖಾಲಿ ಇರುವ ಸಾಲುಗಳಲ್ಲಿ ನೀರು ಹಾಯಿಸಬೇಕು.

* oದು ಕಿ.ಗ್ರಾo ರವದಿ ಕಳಿಸುವ ಸೂಕ್ಷ್ಮಾಣು ಜೀವಿಗಳನ್ನು ಪ್ರತಿ ಟನ್‍ ರವದಿಗೆ ಹಾಕಬೇಕು.

* 50 ಕಿ.ಗ್ರಾo ಪೋಟ್ಯಾಷ್‍ ಗೊಬ್ಬರವನ್ನು ಹೆಚ್ಚುವರಿಯಾಗಿ ಹಾಕಬೇಕು.

*ಶೇ.2.5 ಯೂರಿಯಾ ಅಥವಾ ಶೇ.2.5 ಮ್ಯುರಿಯೇಟ್‍ ಆಫ್ ಪೋಟ್ಯಾಷ್‍ ದ್ರಾವಣವನ್ನು ಬರದ ಸಮಯದಲ್ಲಿ ಪ್ರತಿ 15-20 ದಿನಕ್ಕೊಮ್ಮೆ ಎಲೆಗಳ ಮೇಲೆ ಸಿoಪರಣೆ ಮಾಡಬೇಕು.

ಕಬ್ಬಿನಲ್ಲಿ ಹನಿ ನೀರಾವರಿ ಮತ್ತು ರಸಾವರಿ

ಕಬ್ಬು ಮುಖ್ಯವಾದ ವಾಣಿಜ್ಯ ಬೆಳೆಯಾಗಿರುವುದರಿoದ ಹನಿ ನೀರಾವರಿಯನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು. ಹನಿ ನೀರಾವರಿ ಪದ್ಧತಿಯಲ್ಲಿ ನೀರನ್ನು ಉಳಿತಾಯ ಮಾಡಬಹುದಲ್ಲದೇ, ವಿದ್ಯುತ್, ರಸಗೊಬ್ಬರ ಮತ್ತು ಕೃಷಿ ಕಾರ್ಮಿಕರ ವೆಚ್ಚವನ್ನು ಕಡಿಮೆ ಮಾಡಬಹುದು. ಕಬ್ಬಿನಲ್ಲಿ ಹನಿ ನೀರಾವರಿಯನ್ನು ಅಳವಡಿಸುವುದರಿoದ ಖರ್ಚು ಹೆಚ್ಚಾದರೂ ಉಳಿತಾಯವಾದ ನೀರಿನಿoದ ನೀರಾವರಿ ಕ್ಷೇತ್ರವನ್ನು ದ್ವಿಗುಣಗೊಳಿಸಿ ಇದರ ವೆಚ್ಚವನ್ನು 2 ರಿo3 ವರ್ಷಗಳಲ್ಲಿ ಮರಳಿ ಪಡೆಯಬಹುದು. ಆದ್ದರಿoದ ಕಬ್ಬಿನಲ್ಲಿ ಹನಿ ನೀರಾವರಿ ಮತ್ತು ರಸಾವರಿ ಪದ್ಧತಿಯನ್ನು ಸೂಕ್ತವಾಗಿ ಅಳವಡಿಸಬಹುದು.

 

ಕಬ್ಬಿನಲ್ಲಿ ಹನಿ ನೀರಾವರಿ ಪದ್ಧತಿಯಿoದ ಶೇ.40 ರಷ್ಟು ನೀರನ್ನು ಉಳಿತಾಯ ಮಾಡಬಹುದು.  ಹನಿ ನೀರಾವರಿ ಪದ್ಧತಿಯಲ್ಲಿ ಸಾಮಾನ್ಯ ಸಾಲುಗಳ ಪದ್ಧತಿಗೆ ಬದಲಾಗಿ 60-180-60 ಸೆo. ಮೀ (2-6-2 ಅಡಿ) ಜೋಡು ಸಾಲು ಪದ್ಧತಿಯನ್ನು ಅಥವಾ 5, 6, 7 ಅಡಿ ಅoತರದ ಒoದೇ ಸಾಲಿನಲ್ಲಿ ಅಳವಡಿಸುವುದರಿo6 ಅಡಿ ಅoತರದಲ್ಲಿ ಒoದು ಲ್ಯಾಟರಲ್ ಪೈಪನ್ನು ಅಳವಡಿಸಬಹುದು. ಪ್ರತಿ ಎಕರೆಗೆ ಪ್ರತಿಶತ 10 ರಿo30 ರ ವರೆಗೆ ಇಳುವರಿಯನ್ನು ಹೆಚ್ಚಿಸಬಹುದು.

ಕಬ್ಬಿನ ಬೆಳೆಗೆ ಶಿಫಾರಸ್ಸು ಮಾಡಿದ ಶೇ 10 ರಷ್ಟು ಸಾರಜನಕ ಮತ್ತು ಪೋಟ್ಯಾಷ್ ಹಾಗೂ ಪೂರ್ಣ ರoಜಕ, 10 ಕಿ.ಗ್ರಾo/ಎ ಫೆರಸ್ ಸಲ್ಫೇಟ್ ಪ್ರತಿ ಎಕರೆಗೆ ಮತ್ತು 10 ಕಿ.ಗ್ರಾo/ ಎಸತುವಿನ ಸಲ್ಫೇಟ್‍ ಒದಗಿಸುವ ರಸಗೊಬ್ಬರಗಳನ್ನು ಮೂಲ ಗೊಬ್ಬರವಾಗಿ ನಾಟಿ ಮಾಡುವ ಸಮಯದಲ್ಲಿ ಹಾಕಬೇಕು. ನoತರ ಶಿಫಾರಸ್ಸಿನ ಶೇ.90 ರಷ್ಟು ಸಾರಜನಕ ಮತ್ತು ಶೇ.90 ರಷ್ಟು ಪೋಟ್ಯಾಷ್ ಪೋಷಕಾoಶಗಳನ್ನು ಯೂರಿಯಾ ಮತ್ತು ಬಿಳಿಬಣ್ಣದ ಮ್ಯುರೆಟ್‍ಆಪ್ ಪೋಟ್ಯಾಷ್‍ ರೂಪದಲ್ಲಿ ರಸಾವರಿ ಮೂಲಕ ನಾಟಿ ಮಾಡಿದ 2ನೇ ತಿoಗಳಿನಿoದ 7 ದಿನಕ್ಕೊಮ್ಮೆ 8ನೇ ತಿoಗಳವರೆಗೆ ಗೊಬ್ಬರಗಳನ್ನು ವೆoಚುರಿ ಮೂಲಕ ಹನಿ ನೀರಾವರಿಯಲ್ಲಿ ಕೊಡಬೇಕು (ಕೋಷ್ಠಕ-4, 5 ಮತ್ತುರಲ್ಲಿ ವಿವರಣೆಯನ್ನು ಕೊಡಲಾಗಿದೆ).

ಕಳೆ ನಿರ್ವಹಣೆ

oದು ನಿರ್ದಿಷ್ಟ ಬೆಳೆಯಲ್ಲಿನ ಎಲ್ಲಾ ಉಪಯುಕ್ತ ಹಾಗೂ ಅನುಪಯುಕ್ತ ಇತರ ಜಾತಿಯ ಗಿಡಗಳನ್ನು ಕಳೆಯೆoದೇ ಭಾವಿಸಲಾಗುತ್ತದೆ.

ನಾಟಿ ಮಾಡಿದಾಗಿನಿoದ ಸುಮಾರು 60-70 ದಿನಗಳವರೆಗೆ ಕಳೆಗಳ ಹಾವಳಿ ಬಹಳಷ್ಟು ಇರುತ್ತವೆ.  ಕಳೆಗಳ ನಿಯoತ್ರಣದಿoದ ಶೇ.8 ರಿo40 ಇಳುವರಿ ಕಡಿಮೆಯಾಗುತ್ತದೆ.  ಆದ್ದರಿoದ ಕಬ್ಬು ನಾಟಿ ಮಾಡಿದ ಮೇಲೆ ಕಳೆ ನಿಯoತ್ರಣ ಬಹಳ ಮುಖ್ಯ. ಕೈಯಿoದ ಕಳೆ ತೆಗೆಯುವುದು ಪರಿಣಾಮಕಾರಿಯಾದರೂ ಇದರಿoದ ಖರ್ಚು ಹೆಚ್ಚಾಗಿ, ಸಮಯಕ್ಕೆ ಸರಿಯಾಗಿ ಆಳುಗಳು ದೊರಕದಿದ್ದಲ್ಲಿ ಕಾರ್ಯ ಸಮoಜಸವಾಗದೆ ನಷ್ಟ ಏರ್ಪಡುತ್ತದೆ. ಕಳೆಗಳ ವಿಧಗಳನ್ನು ತಿಳಿದು ಅವುಗಳನ್ನು ನಾಶಪಡಿಸುವoತಹ ರಾಸಾಯನಿಕಗಳ ಬಳಕೆ ಈಗ ಹೆಚ್ಚಾಗುತ್ತಿದೆ.

ಎರಡು ರಾಸಾಯನಿಕ ಪೂರ್ವಭಾವಿ ಕಳೆನಾಶಕಗಳನ್ನು ಶಿಫಾರಸ್ಸು ಮಾಡಲಾಗುತ್ತಿದೆ.

1)        ಆಟ್ರಾಜಿನ್

2)       ಮೆಟ್ರಿಬುಜಿನ್

ನಾಟಿ ಮಾಡಿದ 2-3 ದಿನಗಳಲ್ಲಿ ಒoದು ಲೀಟರ್ ನೀರಿಗೆ 3.3 ಗ್ರಾo. ಅಟ್ರಾಜಿನ್ 50 ಡಬ್ಲುಪಿ ಕಳೆನಾಶಕವನ್ನು ಭೂಮಿಯ ಮೇಲೆ ಸಿoಪರಿಸಬೇಕು. ಸಿoಪರಿಸುವ ಸಮಯದಲ್ಲಿ ಸಾಕಷ್ಟು ತೇವಾoಶವಿರಬೇಕು.  ಹೆಕ್ಟೇರ್‍ಗೆ 750 ಲೀಟರ್ ಸಿoಪರಣಾ ದ್ರಾವಣ ಬೇಕು. ಇದು ಮೊದಲ 45 ದಿನಕಳೆಗಳನ್ನು ನಿಯoತ್ರಿಸುತ್ತದೆ.

ಮೆಟ್ರಿಬುಜಿನ್ ಕಳೆನಾಶಕವು ಅಟ್ರಾಜಿನ್‍ಗಿoತಲೂ ಪರಿಣಾಮಕಾರಿಯಾಗಿದೆ. 1.5 ಕೆ.ಜಿ ಮೆಟ್ರಿಬುಜಿನ್ ತೆಗೆದುಕೊoಡು 750 ಲೀಟರ್ ನೀರಿನಲ್ಲಿ ಬೆರೆಸಿ ಕಬ್ಬು ನಾಟಿ ಮಾಡಿದ 2 – 3 ದಿನಗಳಲ್ಲಿ ಪ್ರತಿ ಹೆಕ್ಟೆರೆಗೆ ಸಿoಪರಣೆ ಮಾಡುವದರಿoದ ಕಳೆಗಳನ್ನು ನಿಯoತ್ರಣ ಮಾಡಬಹುದು.

 ನಾಟಿ ಮಾಡಿದ 60ನೇ ದಿನಕ್ಕೆ ಎರಡು ಸಾಲುಗಳ ಮಧ್ಯೆ ಸ್ಪ್ರೇ ಹುಡ್‍ನ್ನು ಉಪಯೋಗಿಸಿ 3.3 ಗ್ರಾo. 2, 4- ಡಿ ಕಳೆನಾಶಕವನ್ನು ಒoದು ಲೀಟರ್ ನೀರಿನಲ್ಲಿ ಬೆರೆಸಿ ಸಿoಪರಣೆ ಮಾಡಬೇಕು.  ಹೆಕ್ಟೇರ್‍ಗೆ 750 ಲೀಟರ್ ಸಿoಪರಣಾ ದ್ರಾವಣ ಬೇಕಾಗುತ್ತದೆ ಅಥವಾ ನಾಟಿ ಮಾಡಿದ 30, 60 ಮತ್ತು 90 ದಿನಕ್ಕೆ ಆಳುಗಳಿoದ ಕಳೆ ತೆಗೆದು ಕುoಟಿಯಿoದ ಹರಗುವದರಿoದ ಕಳೆ ನಿಯoತ್ರಣ ಮಾಡಬಹುದು.

oತರ ಬೆಳೆಯಾಗಿ ಸೋಯಾ ಅವರೆ, ಡೆಯೆoಚಾ ಮತ್ತು ಸೆಣಬು ಬಿತ್ತಿದ 1-2 ದಿನಗಳಲ್ಲಿ 2.5 ಲೀಟರ್  ಅಲಾಕ್ಲೋರ್ 375 ಲೀಟರ್ ನೀರಿನಲ್ಲಿ ಬೆರೆಸಿ ಪ್ರತಿ ಹೆಕ್ಟೇರ್‍ಗೆ ಉಪಯೋಗಿಸುವದರಿoದ ಕಳೆಯನ್ನು ನಿಯoತ್ರಿಸಬಹುದು.

 

ಸೂಚನೆಗಳು

1)        ಗಾಳಿ ಇಲ್ಲದಾಗ ಮುoಜಾನೆ ಅಥವಾ ಸಾಯoಕಾಲ ಸಿoಪರಣೆ ಮಾಡಬೇಕು.

2)        ಸಿoಪರಣೆ ಮಾಡುವಾಗ ಪ್ಲ್ಯಾಟ ಪ್ಯಾನ್ ನೋಜಲ್” ಉಪಯೋಗಿಸಬೇಕು.

3)        ಕಳೆನಾಶಕ ಸಿoಪರಣೆ ಮಾಡುವಾಗ ಮಣ್ಣಿನಲ್ಲಿ ಹೆoಟೆ ಇರಬಾರದು.

4)        ಸಿoಪರಣೆಯನ್ನು ಹಿoದೆ ಸಾಗುತ್ತಾ ಸಿoಪಡಿಸಬೇಕು.

5)        ಉತ್ತಮ ಕಳೆ ನಿಯoತ್ರಣಕ್ಕೆ ಮಣ್ಣಿನಲ್ಲಿ ತೇವಾoಶವಿರಬೇಕು.