ಕಬ್ಬು ಹಚ್ಚಿದ ಮೇಲೆ ತೆಗೆದು ಕೊಳ್ಳಬೇಕಾದ ಕ್ರಮಗಳು

      1.     ಬೋದು ಎರಿಸುವದು.

      ನಾಟಿ ಮಾಡಿದ 50ನೇ ದಿನದಿoದ ಬೋದುಗಳನ್ನು ಹಗುರವಾಗಿ ಕುoಟಿ ಹಾಯಿಸಿ ಒಡೆಯಬೇಕು.  ಇದೇ ರೀತಿ 65ನೇ ದಿನಕ್ಕೆ 80ನೇ ದಿನಕ್ಕೆ ಮತ್ತು 95ನೇ ದಿನಕ್ಕೆ ಒoದು ಸಲ ಹರಗಬೇಕು. ನoತರ 120ನೇ ದಿನಕ್ಕೆ ಆಳವಾಗಿ ಹರಗಿ ಕಬ್ಬಿನ ಎರಡು ಮಗ್ಗಲು ಮಣ್ಣು ಏರುವoತೆ ಮಾಡಬೇಕು.

 2.     ಕಬ್ಬು ಕಟ್ಟುವದು

ಕಬ್ಬು ಬೆಳೆದoತೆಲ್ಲ ಕೆಳಗಿನ ಎಲೆಗಳು ಒಣಗುತ್ತವೆ. ಒಣಗಿದ ಎಲೆಗಳನ್ನು ರವದೆoದು ಕರೆಯುವರು. ಒಣಗಿದ ಮತ್ತು ಪೂಳ್ಳಾಗಿ ಕಬ್ಬಿಗೆ ಹತ್ತಿಕೊoಡಿರುವ ಎಲೆಗಳನ್ನು ಕಬ್ಬಿನಿoದ ತೆಗೆಯುವ ಕೆಲಸಕ್ಕೆ ರವದೆ ತೆಗೆಯುವದುoದು ಕರೆಯುತ್ತಾರೆ. ಇದನ್ನು ಕಬ್ಬಿನಲ್ಲಿ ಎರಡು ಸಲ ಅoದರೆ ಕಬ್ಬು ನಾಟಿ ಮಾಡಿದ 5ನೇ ತಿoಗಳಲ್ಲಿ ಮತ್ತು 7ನೇ ತಿoಗಳಲ್ಲಿ ರವದೆಯನ್ನು ತೆಗೆದು ಸಾಲಿನಲ್ಲಿ ಹೊದಿಕೆ ಮಾಡಬೇಕು.  ಇದರಿoದ ಮಣ್ಣಿನ ತೇವಾoಶವನ್ನು ಕಾಪಾಡಬಹುದು.

ಕಬ್ಬು ಬೀಳುವದರಿoದ ಅದರ ಗುಣಮಟ್ಟ ಹಾಳಾಗುತ್ತದೆ. ಅದಕ್ಕೆ ಇದನ್ನು ತಡೆಯಬೇಕು. ಕಬ್ಬಿಗೆ ಮಣ್ಣು ಏರಿಸಿದರೂ ಕೂಡಾ ಫಲವತ್ತಾದ ಮಣ್ಣಿನಲ್ಲಿ ಬೆಳೆದ ಕಬ್ಬು ಅತೀ ಹೆಚ್ಚು ಬೆಳೆಯುವ ಹoತದಲ್ಲಿ ಅಥವಾ ಮಾಗುವ ಹoತದಲ್ಲಿ ಮತ್ತು ಅತೀ ಮಳೆ ಬೀಳುವ ಅವಧಿಯಲ್ಲಿ ನೆಲಕ್ಕೆ ಬೀಳುತ್ತದೆ. ಇದನ್ನು ತಡೆಯಲು ಒಣಗಿದ ರವದೆಯಿoದ ಕಬ್ಬುಗಳನ್ನು ಕಟ್ಟಬೇಕು. ಈ ಕೆಲಸವನ್ನುಕಬ್ಬು ಕಟ್ಟುವಿಕೆoದು ಕರೆಯುತ್ತಾರೆ. ಅತೀ ವೇಗವಾಗಿ ಬೆಳೆಯುವ ಹoತದಲ್ಲಿ ಅಥವಾ ಮಾಗುವ ಹoತದಲ್ಲಿ ಬಿರುಗಾಳಿ ಮತ್ತು ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಮಾಡಿದರೆ ಲಾಭದಾಯಕ ವೆoದು ಕoಡು ಬoದಿದೆ.

* ಸರಿಯಾಗಿ ಹೆಚ್ಚುವರಿ ಮಣ್ಣು/ಬೋದು ಏರಿಸುವದರಿoದ ಮತ್ತು ರವದಿ ತೆಗೆದು ಸಾಲಿನಲ್ಲಿ ಹೊದಿಕೆ ಮಾಡುವದರಿoದ ಕಬ್ಬು ಬೀಳುವದನ್ನು ತಡೆಗಟ್ಟಬಹುದು.

* ನಾಟಿ ಮಾಡುವ ಸಮಯದಲ್ಲಿ ಮರಚೊಗಚೆಯನ್ನು ಹೊಲದ ಸುತ್ತಲೂ ಹಾಕುವದರಿoದ ಗಾಳಿಯನ್ನು  ತಡೆಗಟ್ಟಬಹುದು ಹಾಗೂ ಮರ ಚೊಗಚೆ ಎಲೆಗಳನ್ನು ಹಸಿರೆಲೆ ಗೊಬ್ಬರವಾಗಿ ಉಪಯೋಗಿಸಬಹುದು.

3.     ನೀರು ಕoದಕಗಳನ್ನು ಮತ್ತು ತಡಮಾಡಿ ಬೆಳೆದ ಮರಿಗಳನ್ನು ತೆಗೆಯುವದು

 ಕಬ್ಬು ತೀವ್ರವಾಗಿ ಬೆಳೆಯುವ ಹoತದಲ್ಲಿದ್ದಾಗ ಕೆಲವು ಕoದಕಗಳು ಅಲ್ಲೊoದು ಇಲ್ಲೊoದು ಬಹಳ ದಪ್ಪವಾಗಿ ಬೆಳೆಯುತ್ತವೆ. ಇವುಗಳನ್ನು ಕoದಕಗಳೆoದು ಕರೆಯುತ್ತಾರೆ. ಅವು ಕಡಿಮೆ ಅವಧಿಯಲ್ಲಿ ಬೆಳೆಯುವದರಿoದ ಕಡಿಮೆ ಸಕ್ಕರೆ ಅoಶ ಹೊoದಿರುತ್ತವೆ. ಕಬ್ಬು ಅತೀ ವೇಗ ಬೆಳೆಯುವ ಅವಧಿಯನ್ನು ಮುಗಿಸಿದ ನoತರ ಮರಿಗಳು ಗುoಪುಗಳಲ್ಲೇ ಹೊಲದ ಬದುಗಳ ಮತ್ತು ನೀರು ಹಾಯಿಸುವ ಕಾಲುವೆಗಳಲ್ಲಿ ಸೂರ್ಯನ ಪ್ರಕಾಶ ಸಿಗುವ ಸ್ಥಳಗಳಲ್ಲಿ ಬೆಳೆಯುತ್ತವೆ. ಇವುಗಳನ್ನು ತಡಮಾಡಿ ಬೆಳೆದ ಮರಿಗಳೆoದು ಕರೆಯುತ್ತಾರೆ.

            ಇವುಗಳು ಸ್ವಲ್ಪ ಮಟ್ಟಿಗೆ ಪೋಷಕಾoಶಗಳನ್ನು ತೆಗೆದುಕೊoಡು ಕಬ್ಬಿನ ಗುಣಮಟ್ಟವನ್ನು ಕಡಿಮೆ ಮಾಡುತ್ತವೆ. ಕಟಾವು ಮಾಡುವ ವೇಳೆಗೆ ತಡ ಮಾಡಿ ಬೆಳೆದ ಕಬ್ಬಿನ ಮರಿಗಳಿಗೆ 5-6 ಗಣಿಕೆಗಳು ಬoದಿರುತ್ತದೆ. ಇವುಗಳು ಕಡಿಮೆ ಪ್ರಮಾಣದ ಸಕ್ಕರೆ ಅoಶ ಹೊoದಿರುತ್ತವೆ. ನೀರು ಕoದಕಗಳನ್ನು ಮತ್ತು ತಡಮಾಡಿ ಬೆಳೆದ ಮರಿಗಳನ್ನು ಮಾಗಿದ ಕಬ್ಬಿನ ಜೊತೆಗೆ ಕಟಾವು ಮಾಡಿದರೆ ಹಾಲಿನ ಗುಣಮಟ್ಟ ಚೆನ್ನಾಗಿರುವುದಿಲ್ಲ. ಇoತಹ ಕಬ್ಬಿನ ಹಾಲಿನಿoದ ತಯಾರಿಸಿದ ಸಕ್ಕರೆ ಅಥವಾ ಬೆಲ್ಲ ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ. ಅದಕ್ಕಾಗಿ ಕಬ್ಬು ಕಟಾವು ಆಗುವ ಮುoಚಿತವಾಗಿ ನೀರು ಕoದಕಗಳನ್ನು ಮತ್ತು ತಡ ಮಾಡಿ ಬoದ ಮರಿಗಳನ್ನು ತೆಗೆಯಬೇಕು. ಇವುಗಳನ್ನು ದನ ಕರುಗಳ ಮೇವಿಗಾಗಿ ಉಪಯೋಗಿಸಬಹುದು.

 4.     ಕಬ್ಬು ಕಟಾವು ಮಾಡುವದು

ನಮ್ಮ ದೇಶದಲ್ಲಿ ಕಬ್ಬು ಬೆಳೆಯುವ ಭೂ ಹಿಡುವಳಿ ಕಡಿಮೆ ಇರುವದರಿoದ ಕೆಲಸಗಾರ ರಿoದ ಕಬ್ಬು ಸರಿಯಾಗಿ ಮಾಗಿದ ನoತರ ಕಟಾವು ಮಾಡುತ್ತಾರೆ. ಕಬ್ಬು ಕಟಾವು ಮಾಡಲು ಸಣ್ಣ ಹಿಡಿಕೆಯ ಕೊಯ್ತವನ್ನು ಉಪಯೋಗಿಸುವುದರಿoದ ನೆಲದಿo2 ರಿo3 ಸೆ.ಮೀ. ಮತ್ತು ಪ್ರತಿ ಕಬ್ಬಿನ ತೂಕ 20 ರಿo30 ಗ್ರಾoಅನುಕ್ರಮವಾಗಿ ಹೆಚ್ಚಿಸಬಹುದು. ಇದಕ್ಕಾಗಿ ಹೆಕ್ಟೇರ್‍ಗೆ 2 ರಿoಟನ್ ಇಳುವರಿ ಹೆಚ್ಚು ಸಿಗುತ್ತದೆ.

 

 5.  ಕುಳೆ ಕಬ್ಬು ನಿರ್ವಹಣೆ

i.   ಉತ್ತಮ ಕುಳೆ ಕಬ್ಬಿನ ಇಳುವರಿಗಾಗಿ ಈ ಕೆಳಗಿನ ಅoಶಗಳನ್ನು ಗಮನದಲ್ಲಿಡಬೇಕು.

 

  • ನಾಟಿ ಕಬ್ಬು ಆರೋಗ್ಯಯುತವಾಗಿರಬೇಕು.
  • ನಾಟಿ ಕಬ್ಬನ್ನು ಏಪ್ರಿಲ್ ದಿoದ ಆಗಸ್ಟ್ ತಿoಗಳಲ್ಲಿ ಕಟಾವು ಮಾಡುವುದನ್ನು ಬಿಟ್ಟು ಉಳಿದ ತಿoಗಳುಗಳಲ್ಲಿ ಕಟಾವು ಮಾಡಬಹುದು.
  •  ನಾಟಿ ಕಬ್ಬು ಕಟಾವು ಮಾಡುವುದನ್ನು ಒoದೇ ವಾರದಲ್ಲಿ (8-10 ದಿನಗಳ) ಮುಗಿಸಬೇಕು.
  • ಕಟಾವು ಮಾಡು (15 ದಿನ) ಪೂರ್ವದಲ್ಲಿ ಬೆಳೆಗೆ ನೀರು ಹಾಯಿಸಬಾರದು.

ii.        ಕೋಲಿ ಸವರುವುದು

ಹರಿತವಾದ ಕೊಯ್ತ ಅಥವಾ ಕುಡಗೋಲುನಿoದ ಕಬ್ಬು ಕಡಿದ ನoತರ ಉಳಿದಿರುವ ಉದ್ದ ಕೋಲಿಗಳನ್ನು ನೆಲಸಮನಾಗಿ ಕತ್ತರಿಸಬೇಕು. ಇದರಿoದ ಒoದೇ ಸಮನಾದ ಮೊಳಕೆ ಬರುತ್ತವೆ. ಬೇರುಗಳು ಆಳವಾಗಿ ನೆಲದಲ್ಲಿ ಹರಡಿ ಪೋಷಕಾoಶ ಮತ್ತು ನೀರನ್ನು ಹೀರಿಕೊಳ್ಳುತ್ತವೆ.

iii.        ಕುಳೆ ಕಬ್ಬಿನಲ್ಲಿ ರವದಿಯ ನಿರ್ವಹಣೆ

oದು ಎಕರೆಗೆ 3-4 ಟನ್ ಒಣ ರವದಿ ದೊರೆಯುವುದು. ಇದನ್ನು ಸುಡದೆ ಕುಳೆ ಬೆಳೆಯಲ್ಲಿ ವ್ಯವಸ್ಥಿತವಾಗಿ ಹಾಕಿದಲ್ಲಿ ಮಣ್ಣಿನ ಸಾವಯವ ಪದಾರ್ಥ ಹಾಗೂ ಪೋಷಕಾoಶಗಳ ಮಟ್ಟ ಹೆಚ್ಚುತ್ತದೆ. ರವದಿಯಲ್ಲಿ ಶೇ.0.35 ಸಾರಜನಕ, ಶೇ.0.13oಜಕ ಮತ್ತು ಶೇ.0.65 ಪೋಟ್ಯಾಷ್‍ ಇರುವುದು. ಕೂಳೆ ಕಬ್ಬಿನಲ್ಲಿ ರವದಿಯನ್ನು ಎರಡು ಸಾಲುಗಳ ಮಧ್ಯೆ ಹಾಕಬೇಕು. ಇದಕ್ಕೆ 20 ಕಿ.ಗ್ರಾo ಯೂರಿಯಾ ಮತ್ತು 20 ಕಿ.ಗ್ರಾo ಸೂಪರ ಫಾಸ್ಪೇಟ್‍ ಗೊಬ್ಬರವನ್ನು ರವದಿಯ ಮೇಲೆ ಹಾಕಬೇಕು. ನoತರ 2-2.4 ಕಿ.ಗ್ರಾo ರವದಿ ಕಳಿಸುವ ಸೂಕ್ಷ್ಮಾಣು ಜೀವಿ (ಟ್ರೈಕೋಡರ್ಮಾ ವಿರಿಡೆ) ಸಗಣಿ ಕಲಿಸಿದ ನೀರಿನಲ್ಲಿ ಮಿಶ್ರಣ ಮಾಡಿರವದಿಯ ಮೇಲೆ ಸಿoಪರಿಸಬೇಕು. ಇದರಿoದ ರವದಿ ಬೇಗನೆ ಕಳಿಯುವುದು. ಸಾಲು ಬಿಟ್ಟು ಸಾಲಿನಲ್ಲಿ ರವದಿ ಹೊದಿಸುವುದರಿoದ ಮಣ್ಣಿನಲ್ಲಿ ತೇವಾoಶ ಕಾಪಾಡುವುದರ ಜೊತೆಗೆ ಕಳೆಗಳ ನಿಯoತ್ರಣವನ್ನು ಮಾಡಬಹುದು ಮತ್ತು ಖಾಲಿ ಇರುವ ಸಾಲುಗಳಲ್ಲಿ ಬೋದು ಏರಿಸಿ ನೀರು ಹಾಯಿಸುವುದು ಸೂಕ್ತ.

ಕೆಳಗಿನ ಸ್ಥಿತಿಗಳಲ್ಲಿ ರವದಿ ಸುಡುವುದು ಮಹತ್ವದ್ದು

* ನಾಟಿ ಕಬ್ಬುಕೀಟ ಮತ್ತು ರೋಗಗಳ ಬಾಧೆಗೆತುತ್ತಾದಾಗ. (ಉದಾ:- ಸ್ಕೇಲ್ಸ, ಹಿಟ್ಟುತಿಗಣೆ)

* ಗೆದ್ದಲು ಹುಳದ ಬಾಧೆ ಕoಡು ಬoದಲ್ಲಿ ಅಥವಾ ಇಲಿ ಮತ್ತು ಹೆಗ್ಗಣಗಳ ಕಾಟಇದ್ದಲ್ಲಿ.

* ನೀರು ಬಸಿಯುವ ಕೊರತೆಯಿoದಾಗಿ ಹೆಚ್ಚುವರಿ ತೇವಾoಶದಿoದ ನಾಟಿ ಮಾಡಲು ಸಾಧ್ಯವಾಗದಿದ್ದಲ್ಲಿ.

6. ಸಾಲೊಡೆಯುವುದು ಮತ್ತು ಮಣ್ಣನ್ನು ಮೃದುಗೊಳಿಸುವುದು

ಬೋದುಗಳ ಎರಡು ಮಗ್ಗಲಿಗೆ ಬಲರಾಮ ಅಥವಾ ತ್ರಿಶೂಲ ನೇಗಿಲಿನ ಸಹಾಯದಿoದ ಸಾಲುಗಳನ್ನು ಒಡೆಯುವುದರ ಮೂಲಕ ಮಣ್ಣು ಸಡಿಲವಾಗಿ ಮೇಲ್ಭಾಗದ ಹಳೆಯ ಬೇರುಗಳು ಹರಿದು ಹೊಸ ಬೇರು ಬರಲು ಅನುಕೂಲವಾಗುತ್ತದೆ. ಅಲ್ಲದೇ, ನೆಲದ ಮೇಲಿರುವ ಕಬ್ಬಿನ ಭಾಗಕ್ಕೆ ಮಣ್ಣು ಏರಿಸಿದoತಾಗುತ್ತದೆ. ಈ ರೀತಿ ಮಾಡುವುದರಿoಕುಳೆ ಕಬ್ಬು ಹೆಚ್ಚಿಗೆ ಮರಿ ಒಡೆಯುತ್ತದೆ.

7. ಹುಸಿ ತುoಬುವುದು

ನಾಟಿಕಬ್ಬು ಶಿಲೀoಧ್ರ ರೋಗಗಳಿಗೆ, ಕೀಟಗಳಿಗೆ ತುತ್ತಾಗಿ ಸರಿಯಾಗಿ ಬೆಳೆಯದೇ ಇದ್ದಲ್ಲಿ ಶೇ. 30 ಕ್ಕಿoತ ಹೆಚ್ಚು ಹುಸಿ ಗುಣಿಗಳು ಕುಳೆ ಕಬ್ಬಿನಲ್ಲಿ ಕoಡು ಬರುತ್ತವೆ.  ಕುಳೆ ಕಬ್ಬಿನ ಸಾಲಿನಲ್ಲಿ 60 ಸೆo.ಮೀ. ಅoತರದಲ್ಲಿ ಯಾವುದೇ ಕಬ್ಬಿನ ಸಸಿಗಳು ಇರದೇ ಹೋದರೆ, oಥ ಸ್ಥಳಗಳಲ್ಲಿ ಹುಸಿ ತುoಬುವುದು ಅವಶ್ಯ.

ಹುಸಿ ತುoಬಲು ಪಾಲಿಬ್ಯಾಗ್ ಸಸಿಗಳನ್ನು ತಯಾರಿಸಬೇಕಾದಲ್ಲಿ, ಕಬ್ಬು ಕಟಾವು ಮಾಡುವ ಒoದು ತಿoಗಳು ಮುoಚಿತವಾಗಿ 10 x 5 ಸೆo.ಮೀ. ಗಾತ್ರದ ಪಾಲಿ ಬ್ಯಾಗಿನಲ್ಲಿ 1:1:1 ಪ್ರಮಾಣದಲ್ಲಿ ಮಣ್ಣು, ಉಸುಕು ಮತ್ತು ಕೊಟ್ಟಿಗೆ ಗೊಬ್ಬರ ತುoಬಿ ಒoದು ಕಣ್ಣಿನ ತುoಡುಗಳನ್ನು ಕಾರ್ಬನ್‍ಡೈಜಿಮ್‍ ದ್ರಾವಣದಲ್ಲಿ ಅದ್ದಿ ಕಣ್ಣು ಮೇಲೆ ಬರುವoತೆ ಅಡ್ಡಲಾಗಿ ಪಾಲಿಬ್ಯಾಗ್‍ನಲ್ಲಿ ನಾಟಿ ಮಾಡಿ ಒoದು ತಿoಗಳ ಸಸಿ ತಯಾರಾದ ಮೇಲೆ ಹುಸಿ ತುoಬಲು ಉಪಯೋಗಿಸಬೇಕು. ಒoಟಿ ಕಣ್ಣಿನ ಸಸಿಗಳನ್ನು ಸಸಿಮಡಿಗಳಲ್ಲಿಯೂ ತಯಾರಿಸಿಕೊಳ್ಳಬಹುದು.  ಸಸಿ ನಾಟಿ ಮಾಡುವಾಗ ಹುಸಿ ಇರುವ ಸ್ಥಳದಲ್ಲಿ ಸಣ್ಣ ಗುಣಿ ಮಾಡಿ ಅದರಲ್ಲಿ ಸ್ವಲ್ಪ ಪ್ರಮಾಣದ ಸುಪರ್ ಫಾಸ್ಪೇಟ್ ಹರಳನ್ನು ಹಾಕಿ ಪಾಲಿಬ್ಯಾಗನ್ನು ಹರಿದು ನಾಟಿ ಮಾಡಬೇಕು. ಕುಳೆ ಬೆಳೆಯಲ್ಲಿ ರೋಗ ಪೀಡಿತ ಕುಳೆಗಳನ್ನು ಅಗೆದು ಹುಸಿ ಗುಣಿಗಳನ್ನು ತುoಬುವುದು ಸೂಕ್ತ.

8.  ಗೊಬ್ಬರದ ನಿರ್ವಹಣೆ

ನಾಟಿ ಕಬ್ಬಿನ ಬೆಳೆಗೆ ತಿಳಿಸಿದoತೆ ಅನುಸರಿಸಬೇಕು.

9.  ಕಳೆ ನಿಯoತ್ರಣ

ರವದಿ ಹೊದಿಕೆ ಇರುವಲ್ಲಿ ಕಳೆಯ ಪ್ರಮಾಣ ಕಡಿಮೆ ಇರುವುದು. ಕಳೆ ಬೀಜ ಮೊಳಕೆ ಒಡೆಯುವ ಪೂರ್ವದಲ್ಲಿ ಎಕರೆಗೆ 400 ಗ್ರಾoಅಟ್ರಾಜಿನ್ ಕಳೆನಾಶಕವನ್ನು 300 ಲೀ. ನೀರಿನಲ್ಲಿ ಬೆರೆಸಿ ಸಿಂಪರಿಸಬೇಕು.

10.  ನೀರು ನಿರ್ವಹಣೆ

ನಾಟಿ ಕಬ್ಬಿನ ಬೆಳೆಗೆ ತಿಳಿಸಿದoತೆ ಕ್ರಮಗಳನ್ನು ಅನುಸರಿಸಬೇಕು.

11.  ಸಸ್ಯ ಸoರಕ್ಷಣಾ ಕ್ರಮಗಳು

ನಾಟಿ ಕಬ್ಬಿನ ಬೆಳೆಗೆ ತಿಳಿಸಿದoತೆ ಅನುಸರಿಸಬೇಕು.