ಮುನ್ನುಡಿ

ಕೆ.ಜೆ. ಸೋಮೈಯಾ ಕೃಷಿ ಅನ್ವಯಿತ ಸಂಶೋಧನಾ ಸಂಸ್ಥೆ

                                   ಗೋದಾವರಿ ಬಯೋರಿಫೈನರೀಜ್ ನಿಯಮಿತ, ಸಮೀರವಾಡಿ
                                           ತಾ: ಮುಧೋಳ              ಜಿ: ಬಾಗಲಕೋಟ

 

ಮುನ್ನುಡಿ

ಆತ್ಮೀಯ ರೈತ ಬಾಂಧವರಲ್ಲಿ ಶ್ರೀ ಸಮೀರ ಎಸ್ ಸೋಮೈಯಾ ಅವರ ನಿವೇದನೆ.

 

      ಕಳೆದ 2-3 ವರ್ಷಗಳಿಂದ ಗೋದಾವರಿ ಬಯೋರಿಫೈನರೀಜ್‍ನ ಕಾರ್ಯಾಚರಣೆಯ ಪ್ರದೇಶದಲ್ಲಿ ಮಳೆಯ ಅಭಾವದಿಂದ ಬಾವಿಗಳು, ಕೊಳವೆ ಬಾವಿಗಳು ಹಾಗೂ ನದಿಗಳಲ್ಲಿ ನೀರಿನ ಲಭ್ಯತೆಯು ತುಂಬಾ ಕುಂಠಿತಗೊಂಡು ಪ್ರತಿ ಎಕರೆಗೆ ಕಬ್ಬಿನ ಉತ್ಪನ್ನವು ಕಡಿಮೆಯಾಗಿದ್ದು ಹಾಗೂ ಕಬ್ಬಿನ ಗುಣಮಟ್ಟವು ಕೂಡಾ ಕ್ಷೀಣಿಸಿದೆ ಮತ್ತು ಕಬ್ಬಿಗೆ ತಗುಲುವ ಸಾಗುವಳಿ ವೆಚ್ಚವು ಕೂಡಾ ಹೆಚ್ಚಾಗಿದೆ.

 

ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ, ಕೀಟ, ರೋಗಗಳ ಬಾಧೆ ಮತ್ತು ಅನಾವೃಷ್ಠಿ ಹಾಗೂ ಅತಿವೃಷ್ಠಿಯಿಂದ ಪ್ರತಿ ವರ್ಷ ರೈತರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೂಡಾ ನಮ್ಮ ಕಬ್ಬು ಬೆಳೆಗಾರರು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ ಆದರೆ ನೈಸರ್ಗಿಕ ಸಮಸ್ಯೆಗಳನ್ನು ಎದುರಿಸಲು ಹಾಗೂ ಕೌಶಲ್ಯಗಳನ್ನು ಸುಧಾರಿಸಲು ಮತ್ತು ಗುಣಮಟ್ಟದ ಕಬ್ಬಿನ ಉತ್ಪಾದನೆಯಲ್ಲಿ ಸಮರ್ಥ ನೀಯತೆಯನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. ಈ ಒಂದು ಪರಿಸ್ಥಿತಿಯಲ್ಲಿ ಕೆ.ಜೆ. ಸೋಮೈಯಾ, ಕೃಷಿ ಅನ್ವಯಿತ ಸಂಶೋಧನಾ ಸಂಸ್ಥೆಯು ಕಬ್ಬು ಬೆಳೆಯುವ ರೈತರ ಹಿತದೃಷ್ಟಿಯಿಂದ ಹಾಗೂ ಪ್ರತಿ ಎಕರೆಗೆ ಕಬ್ಬಿನ ಉತ್ಪನ್ನವನ್ನು ಹೆಚ್ಚಿಸುವ ಸಲುವಾಗಿ ಕಬ್ಬಿನ ಸುಧಾರಿತ ಬೇಸಾಯ ಕ್ರಮಗಳು ಎನ್ನುವ ಕೈಪಿಡಿಯನ್ನು ತಮ್ಮ ಮುಂದೆ ತರುತ್ತಿರುವುದು ಅತೀವ ಸಂತೋಷವೆನಿಸುತ್ತದೆ. ಈ ಕೈಪಿಡಿಯಲ್ಲಿ ನೂತನ, ಸುಲಭವಾದ ತಂತ್ರಜ್ಞಾನಗಳ ಬಗ್ಗೆ ಕೇಂದ್ರಿಕರಿಸಿದ್ದು ಹಾಗೂ ರೈತರಿಗೆ ಉತ್ತಮ ಕಬ್ಬು ಉತ್ಪಾದನೆ ಮತ್ತು ಉತ್ತಮ ಆರ್ಥಿಕ ಲಾಭವನ್ನು ಪಡೆಯುವುದರ ಬಗ್ಗೆ ಮಾಹಿತಿಯನ್ನು ಸವಿಸ್ತಾರವಾಗಿ ಕೊಡಲಾಗಿದೆ.

ನಾನು ತಮ್ಮಲ್ಲಿ (ಕಬ್ಬು ಬೆಳೆಗಾರರಲ್ಲಿ) ವಿನಂತಿಸಿ ಕೊಳ್ಳುವುದೇನೆಂದರೆ ಈ ಕೈಪಿಡಿಯಲ್ಲಿರುವ ಸಲಹೆ, ಸೂಚನೆ ಮತ್ತು ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳುವುದರೊಂದಿಗೆ ತಾಂತ್ರಿಕ ಜ್ಞಾನ ಹೆಚ್ಚಿಸಿಕೊಂಡು, ಪ್ರತಿ ಎಕರೆಗೆ ಉತ್ತಮ ಇಳುವರಿಯನ್ನು ಪಡೆಯಬೇಕೆಂದು ಕೇಳಿಕೊಳ್ಳುತ್ತೇನೆ.

            ಉತ್ತಮ ಗುಣಮಟ್ಟದ ಕಬ್ಬಿನ ಇಳುವರಿ ಸುಧಾರಣೆಯಾಗಲು ಹಾಗೂ ನಿಮ್ಮ ಪ್ರಯತ್ನದಲ್ಲಿ ಯಶಸ್ಸು ಸಿಗಲೆಂದು ನಾನು ಹಾರೈಸುತ್ತೇನೆ.

 

   ತಮ್ಮ ವಿಶ್ವಾಸಿಕ

   (ಸಮೀರ ಎಸ್ ಸೋಮೈಯಾ)

            ಮಹಾಪೋಷಕರುಚೇರಮನ್ನರು ಮತ್ತು ಮುಖ್ಯವ್ಯವಸ್ಥಾಪಕ ನಿರ್ದೇಶಕರು

              ಗೋದಾವರಿ ಬಯೋರಿಫೈನರೀಜ್ ಲಿ., ಸಮೀರವಾಡಿ

No comments.